ಕ್ರಿಕೆಟ್

ಕರ್ನಾಟಕ ಸೇರಿ 6 ರಾಜ್ಯಗಳಲ್ಲಿನ ಬಡ ಮಕ್ಕಳ ಚಿಕಿತ್ಸೆಗೆ ಸಚಿನ್ ಆರ್ಥಿಕ ಸಹಾಯ!

Vishwanath S

ಮುಂಬೈ: ಆರು ರಾಜ್ಯಗಳಲ್ಲಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಬಡ 100 ಮಕ್ಕಳ ಚಿಕಿತ್ಸೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದು ಅವರಿಗೆ ಸಂಬಂಧಿಸಿರುವ ಚಾರಿಟಿ ಫೌಂಡೇಶನ್ ತಿಳಿಸಿದೆ.

ಎಕಾಮ್ ಪ್ರತಿಷ್ಠಾನದೊಂದಿಗೆ ಸಚಿನ್ ಅವರ ಸಹಭಾಗಿತ್ವವಿದೆ. ಈ ಪ್ರತಿಷ್ಠಾನವೂ ಸರ್ಕಾರಿ ಮತ್ತು ಟ್ರಸ್ಟ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮಕ್ಕಳನ್ನು ಕೇಂದ್ರಿಕರಿಸಿ ಚಿಕಿತ್ಸೆ ನೀಡುತ್ತಿದೆ. 

ಈ ಪ್ರತಿಷ್ಠಾನದ ಮೂಲಕ ಸಚಿನ್ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ಕರ್ನಾಟಕ, ತಮಿಳುನಾಡು, ಮತ್ತು ಆಂಧ್ರಪ್ರದೇಶದ ಮಕ್ಕಳಿಗೆ ಸಹಾಯ ಮಾಡಿದ್ದಾರೆ. 

ಕಡಬಡ ಕುಟುಂಬಗಳ ಮಕ್ಕಳು, ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದು ಅಂತಹವರಿಗೆ ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಧ್ಯವಾಗದವರಿಗೆ ಸಚಿನ್ ಅವರ ಪ್ರತಿಷ್ಠಾನದ ಬೆಂಬಲ ನೀಡುತ್ತಿದೆ.

"ಶ್ರೀ ಸಚಿನ್ ತೆಂಡೂಲ್ಕರ್, ಫೌಂಡೇಶನ್ ಒಡನಾಟ ಬಹಳ ಫಲಪ್ರದವಾಗಿದೆ ಮತ್ತು ಸಚಿನ್ ಆರೋಗ್ಯ ವಿಷಯದಲ್ಲಿ ಕೆಲವು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಂಘವು ಕೆಲಸ ಮಾಡಿದೆ ಎಂದು ಎಕಾಮ್ ಫೌಂಡೇಶನ್‌ನ ವ್ಯವಸ್ಥಾಪಕ ಪಾಲುದಾರ ಅಮೀತಾ ಚಟರ್ಜಿ ಹೇಳಿದರು.

SCROLL FOR NEXT