ಕ್ರಿಕೆಟ್

ಐಪಿಎಲ್: ರೋಹಿತ್ ಶರ್ಮಾ ನೂತನ ದಾಖಲೆ, ಕಿಂಗ್ಸ್ ವಿರುದ್ಧ ಮುಂಬೈಗೆ 48 ರನ್ ಭರ್ಜರಿ ಜಯ

Raghavendra Adiga

ಅಬುಧಾಬಿ: ಅಬುಧಾಬಿಯಲ್ಲಿ ನಡೆಯುತ್ತಿರುವ ಐಪಿಎಲ್ ಸರಣಿಯ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್  ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 48 ರನ್ ಗಳಿಂದ ಜಯ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಮುಂಬೈ ರೋಹಿತ್ ಶರ್ಮಾ ಅವರ ಅಮೋಘ ಪ್ರದರ್ಶನದ ನೆರವಿನಿಂದ ನಿಗದಿತ ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತ್ತು.

ಮುಂಬೈ ಪರ ರೋಹಿತ್ ಶರ್ಮಾ (70), ಪೊಲ್ಲಾರ್ಡ್ (47*), ಹಾರ್ದಿಕ್ ಪಾಂಡ್ಯ (30*), ಸೂರ್ಯ ಕುಮಾರ ಯಾದವ್(10), ಇಶಾನ್ ಕಿಶನ್ (28), ರನ್ ಸಿಡೀಸಿದ್ದರು.

ಗೆಲ್ಲಲು 192 ರನ್ ಗುರಿ ಪಡೆದ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಸಾಧ್ಯ ಆಗಿದೆ.

ಪಂಜಾಬ್ ಪರ ನಿಕೋಲಸ್ ಪೋರನ್ (44), ಮಯಾಂಕ್ ಅಗರ್ವಾಲ್ (25), ಕೃಷ್ಣಪ್ಪ ಗೌತಮ್ (22), ಕೆ.ಎಲ್. ರಾಹುಲ್ (17) ರನ್ ಗಳಿಸಿದ್ದರು.

ಪಂಜಾಬ್ ಪರ ಗೌತಮ್ ಕೊಟ್ರೇಲ್ ಹಾಗೂ ಮಹಮದ್ ಶಮಿ, ಕೃಷ್ಣಪ್ಪ ಗೌತಮ್  ತಲಾ ಒಂದು ವಿಕೆಟ್ ಪಡೆದರೆ ಮುಂಬೈ ಪರ ಜಸ್ಪ್ರೀತ್ ಬುಮ್ರಾ , ರಾಹುಲ್ ಚಾಹರ್, ಜೇಮ್ಸ್ ಪ್ಯಾಟಿನ್ಸನ್ ತಲಾ 2 ವಿಕೆಟ್ ಕಿತ್ತರು.

ರೋಹಿತ್ ಶರ್ಮಾ ದಾಖಲೆ

ಮುಂಬೈ ಪರ ಆಡಿದ  ರೋಹಿತ್ ಶರ್ಮಾತಾವು ಇನ್ನಿಂಗ್ಸ್ ನಲ್ಲಿ 4 ರನ್ ಗಳಿಸಿದ್ದಾಗ ಐಪಿಎಲ್ ನಲ್ಲಿ 5 ಸಾವಿರ ರನ್ ಪೂರೈಸಿದ ದಾಖಲೆ ಬರೆದರು. ಇದರ ಮೂಲಕ ಈ ವರೆಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ತಂಡದ ಸುರೇಶ್ ರೈನಾ ಅವರ ಹೆಸರಲ್ಲಿ ಮಾತ್ರವೇ ಇದ್ದ ಈ ದಾಖಲೆ ಪಟ್ಟಿಗೆ ಮೂರನೇಯವರಾಗಿ ಸೇರಿದರು.

1500 ರನ್ ಪೂರೈಸಿದ ಮಯಾಂಕ್

ಇನ್ನು ಪಂಜಾಬ್ ಪರವಾಗಿ ಬ್ಯಾಟಿಂಗ್ ನಡೆಸಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಸಹ ಇದೇ ಪಂದ್ಯದಲ್ಲಿ ಐಪಿಎಲ್ ನಲ್ಲಿ 1500 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. 

SCROLL FOR NEXT