ಕ್ರಿಕೆಟ್

ಗಾಯದ ಸಮಸ್ಯೆ: ಐಪಿಎಲ್ ನಿಂದ ಭುವನೇಶ್ವರ್ ಕುಮಾರ್ ಹೊರಕ್ಕೆ

Raghavendra Adiga

ಅಬುದಾಬಿ: ಈ ಸಾಲಿನ ಐಪಿಎಲ್ ನಡುವೆಯೇ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡದಲ್ಲಿದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಗಾಯದ ಸಮಸ್ಯೆಯಿಂದ ಐಪಿಎಲ್ 2020 ರಿಂದ ಹೊರನಡೆದಿದ್ದಾರೆ.

ಭುವನೇಶ್ವರ್  ಕಳೆದ ವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುವ ವೇಳೆ ತೊಡೆಗೆ ಗಾಯವಾಗಿತ್ತು. ಇದೇ ಕಾರಣದಿಂದ ಇದೀಗ ಭುವನೇಶ್ವರ್ ಹೈದರಾಬಾದ್ ಟೀಂನಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಆಂಧ್ರದವರೇ ಆದ ಇನ್ನೊಬ್ಬ ಎಡಗೈ ವೇಗದ ಬೌಲರ್ ಪೃಥ್ವಿ ರಾಜ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದ ಸನ್‌ರೈಸರ್ಸ್‌ನ ಕೊನೆಯ ಪಂದ್ಯದಿಂದ ಹೊರಬಂದ ನಂತರ ಭುವನೇಶ್ವರ್ ತಾವು ಮುಂದಿನ ಐಪಿಎಲ್ ಪಂದ್ಯಗಳಲ್ಲಿ ಭಾಗವಹಿಸುವ ಬಗ್ಗೆ ಕಳವಳ  ವ್ಯಕ್ತಪಡಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅವರು ನಾಲ್ಕನೇ ಓವರ್‌ಗೆ ಕೇವಲ ಒಂದು ಎಸೆತವನ್ನು ಎಸೆದಿದ್ದರು. ಆ ಸಮಯ ಅವರ ತೊಡೆಯಲ್ಲಿ ಗಾಯವಾಗಿದ್ದಾಗಿ ತಿಳಿದುಬಂದಿದೆ. ಗಾಯ ಎಷ್ಟು ಗಂಭೀರವಾಗಿದೆ ಎಂದು ಖಚಿತಪಡಿಸಲು ಸಾಧ್ಯವಿಲ್ಲ. ಆದಾಗ್ಯೂ, ಭಾರತದ ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ಲೆಕ್ಕಾಚಾರದಲ್ಲಿರುವ ಕಾರಣ ಭುವನೇಶ್ವರ್ ಐಪಿಎಲ್ ನಿಂದ ದೂರವಾಗಲು ತೀರ್ಮಾನಿಸಿದ್ದಾರೆ.

ಪೃಥ್ವಿ ರಾಜ್ 22 ವರ್ಷದ ಎಡಗೈ ವೇಗದ ಬೌಲರ್ ಆಗಿದ್ದು, ಆಂಧ್ರ ಪರ ಕೇವಲ ಹತ್ತು ಪ್ರಥಮ ದರ್ಜೆ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆದಾಗ್ಯೂ, ಕಳೆದ ಮೂರು ಋತುಗಳಲ್ಲಿ ಆಯ್ಕೆಗಳು ನಡೆದಾಗಲೆಲ್ಲಾ ತಾವು ಪ್ರಧಾನ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇವರ ಬೌಲಿಂಗ್ ನ ವೇಗ ಅವರ ಸಹವರ್ತಿ ಖಲೀಲ್ ಅಹ್ಮದ್ ಅವರಂತಿರಲಿದೆ. ಇವರು ಈ ಹಿಂದೆ 2019 ರ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಯ್ಕೆಯಾಗಿ ಕೇವಲ ಎರಡು ಪಂದ್ಯಗಳನ್ನು ಆಡಿದ್ದಾರೆ. 

SCROLL FOR NEXT