ಕ್ರಿಕೆಟ್

ಮಾಜಿ ರಣಜಿ ಕ್ರಿಕೆಟಿಗ ಕೇರಳದ ಸುರೇಶ್ ಕುಮಾರ್ ಆತ್ಮಹತ್ಯೆ

Raghavendra Adiga

ಕೊಚಿನ್: ರಣಜಿ ಟ್ರೋಫಿ ಮಾಜಿ ಕ್ರಿಕೆಟಿಗ ಎಂ.ಸುರೇಶ್ ಕುಮಾರ್ (47)  ಶುಕ್ರವಾರ ಆಲಪ್ಪುಳದಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಂಜೆ 7.30 ರ ಸುಮಾರಿಗೆ ಪಳವೀಡು ನಲ್ಲಿರುವ ಅವರ ಮನೆಯ ಮೇಲಿನ ಛಾವಣಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ  ಅವರ ದೇಹ ಪತ್ತೆಯಾಗಿದೆ. ಶವವನ್ನು ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಪೋಲೀಸ್ ತನಿಖೆ ನಡೆಯುತ್ತಿದೆ.

ಮೃತ ಸುರೇಶ್ ಕುಮಾರ್ ಅವರಿಗೆ ಪತ್ನಿ ಮಂಜು ಮತ್ತು ಮಗ ಅತುಲ್ ಇದ್ದಾರೆ.

ಕೇರಳ ಕ್ರಿಕೆಟ್ ಸಂಘದ ಅಧಿಕಾರಿಯಾಗಿದ್ದ ಆಲಪ್ಪುಳಾ ಕ್ರಿಕೆಟ್ ಸಂಘದ ಮಾಜಿ ಕಾರ್ಯದರ್ಶಿ ಕೆ ಸನಾಲ್ ಕುಮಾರ್ ಅವರು ಸುರೇಶ್ ಕುಮಾರ ವರ ಅಕಾಲಿಕ ನಿಧನಕ್ಕೆ ಆಘಾತ ವ್ಯಕ್ತಪಡಿಸಿದರು. ಕೆ ಸನಾಲ್ ಕುಮಾರ್ ರಚಿಸಿದ ಕ್ಲಬ್‌ನಲ್ಲಿ ಸುರೇಶ್ ಕ್ರಿಕೆಟ್‌ನಲ್ಲಿ ತಮ್ಮ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದ್ದರು, ಅಲ್ಲದೆ  ರಾಷ್ಟ್ರೀಯ ತಂಡದ ಯುವ ತಂಡದಲ್ಲಿ ಸ್ಥಾನ ಪಡೆದ ಮೊದಲ ಮಲಯಾಳಿ ಆಟಗಾರನೆಂಬ ಕೀರ್ತಿ ಇವರದಾಗಿತ್ತು.

ಸುರೇಶ್ ದಕ್ಷಿಣ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದು ಇಎಸ್ಪಿಎನ್ ಕ್ರಿಕ್ಇನ್ಫೊ ಎಡಗೈ ಸ್ಪಿನ್ನರ್ ಆಗಿ, ಸುರೇಶ್ 72 ಪ್ರಥಮ ದರ್ಜೆ ಪಂದ್ಯಗಳನ್ನು (1991-99) ಆಡಿ, 196 ವಿಕೆಟ್ ಗಳನ್ನು 27.77 ಸರಾಸರಿಯಲ್ಲಿ ಪಡೆದದ್ದಲ್ಲದೆ   1,497 ರನ್ಗಳನ್ನು 19.49 ಸರಾಸರಿಯಲ್ಲಿ ಗಳಿಸಿದ್ದರು, ಇನ್ನಿಂಗ್ಸ್ ಒಂದರಲ್ಲಿ ಗಳೀಸಿದ್ದ 101 ರನ್ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು,

13 ನೇ ವಯಸ್ಸಿನಿಂದ ಫೀಲ್ಡರ್ ಆಗಿ ತಮ್ಮ ಚುರುಕುತನಕ್ಕಾಗಿ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ದಂತಕಥೆ ಜಾಂಟಿ ರೋಡ್ಸ್ ಮಟ್ಟಕ್ಕೆ ಫೀಲ್ಡಿಂಗ್ ತೆಗೆದುಕೊಳ್ಳುವ ಮೂಲಕ ಖ್ಯಾತಿಯ ಶಿಖರಕ್ಕೇರಿದ್ದರು. ರಾಹುಲ್ ದ್ರಾವಿಡ್ ಸಹ ಸುರೇಶ್ ಅವರ ಆಟವನ್ನು ಮೆಚ್ಚಿದ್ದರು.. 90 ರ ದಶಕದ ಆರಂಭದಲ್ಲಿ ರಣಜಿ ಋತುವಿನಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆತಮಿಳುನಾಡು ವಿರುದ್ಧ ಕೇರಳದ ಗೆಲುವಿನಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸುರೇಶ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದರು, ಇದರಲ್ಲಿ ಡಬ್ಲ್ಯು ವಿ ರಾಮನ್ ಮತ್ತು ರಾಬಿನ್ ಸಿಂಗ್ ಅವರ ಪ್ರೈಸ್ ಸ್ಕಲ್‌ಪ್‌ಗಳು ಸೇರಿವೆ.

ಅವರು 1986-89ರಲ್ಲಿ U-15 ರಾಜ್ಯ ಆಟಗಾರರಾಗಿ ನಂತರ ಮೇಲೇರುತ್ತಾ ಸಾಗಿ 1987-89ರಲ್ಲಿ U-17 ನಾಯಕ ಮತ್ತು 1988-92ರಲ್ಲಿ U-19 ಆಟಗಾರರಾದರು. 1990-92ರ ಅವಧಿಯಲ್ಲಿ ಅವರು ಕೇರಳ ಅಂಡರ್ -19 ತಂಡವನ್ನು ಬಿಟ್ಟು ಹೊರನಡೆದಿದ್ದರು.ಸುರೇಶ್ 1991-92ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಅಂಡರ್ -19 ಪರ ಆಡಿದ್ದರು. 1991 ರಿಂದ 99 ರವರೆಗೆ ಕೇರಳ ಮತ್ತು ರೈಲ್ವೆ ಎರಡನ್ನೂ ಪ್ರತಿನಿಧಿಸಿದ ಅವರು ರಣಜಿ ಟ್ರೋಫಿಯಲ್ಲಿ ನಿಯಮಿತ ಕ್ರೀಡಾಪಟುವಾಗಿದ್ದರು.
 

SCROLL FOR NEXT