ನವದೆಹಲಿ: ಕೋಲ್ಕತಾ ನೈಟ್ ರೈಡರ್ಸ್ ಆಟಗಾರ ಸುನಿಲ್ ನರೈನ್ ಐಪಿಎಲ್ನಲ್ಲಿ ಅನುಮಾನಾಸ್ಪದ ಬೌಲಿಂಗ್ ಶೈಲಿ ಹೊಂದಿದ್ದಾರೆಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಬೌಲಿಂಗ್ ಆಕ್ಷನ್ ಸಮಿತಿ, ಸ್ಪಿನ್ ಬೌಲರ್ ಗೆ ಕ್ಲೀನ್ ಚಿಟ್ ನೀಡಿದೆ.
ಈ ಸಂಬಂಧ ಐಪಿಎಲ್ ಸಮಿತಿ ಭಾನುವಾರ ಹೇಳಿಕೆ ಬಿಡುಗಡೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ನಂತರ ಆನ್-ಫೀಲ್ಡ್ ಅಂಪೈರ್ಗಳು ಅನುಮಾನಾಸ್ಪದ ಬೌಲಿಂಗ್ ಕ್ರಮಕ್ಕೆ ದೂರು ನೀಡಿದ್ದರು.
ಇದರಿಂದ ಐಪಿಎಲ್ ಆಕ್ಷನ್ ಸಮಿತಿ ನರೈನ್ ಅವರನ್ನು ಎಚ್ಚರಿಕೆ ಪಟ್ಟಿಯಲ್ಲಿ ಇರಿಸಿತ್ತು. ಅಲ್ಲದೆ ಅವರಿಗೆ ಟೂರ್ನಿಯಲ್ಲಿ ಬೌಲಿಂಗ್ ಮಾಡಲು ಅವಕಾಶ ಇತ್ತು. ಆದರೆ ಮತ್ತೊಂದು ದೂರ ಬಂದಿದ್ದರೆ, ನರೈನ್ ಕ್ಲೀನ್ ಚಿಟ್ ಪಡೆಯುವವರೆಗೂ ಹೊರಗುಳಿಯಬೇಕಿತ್ತು.