ಕ್ರಿಕೆಟ್

ಬಟ್ಲರ್ ಭರ್ಜರಿ ಅರ್ಧಶತಕ: ಚೆನ್ನೈ ವಿರುದ್ಧ ರಾಜಸ್ಥಾನಕ್ಕೆ 7 ವಿಕೆಟ್ ಗಳ ಗೆಲುವು; ಪ್ಲೇ ಆಫ್ ಕನಸು ಜೀವಂತ

Srinivas Rao BV

ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಡ್ಡಿದ್ದ 125 ರನ್ ಗಳ ಸಾಧಾರಣ ಮೊತ್ತದ ಸ್ಕೋರ್ ನ್ನು ಸುಲಭವಾಗಿ ಚೇಸ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ಗೆಲುವಿನ ಖಾತೆಗೆ ಮತ್ತೊಂದು ಪಂದ್ಯವನ್ನು ಸೇರಿಸಿಕೊಂಡಿದೆ. 

ಸ್ಟೀವನ್ ಸ್ಮಿತ್ 26 (34) ಜೋಸ್ ಬಟ್ಲರ್ 70 (48) ಅವರ ಅದ್ಭುತ ಜೊತೆಯಾಟದ ಪರಿಣಾಮ ರಾಜಸ್ಥಾನ ತಂಡ 17.3 ಓವರ್ ಗಳಿಗೇ 3 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ ಜಯ ದಕ್ಕಿಸಿಕೊಂಡಿತು. 

ಈ ಮೂಲಕ 10 ಪಂದ್ಯಗಳಲ್ಲಿ ನಾಲ್ಕನೇ ಪಂದ್ಯವನ್ನು ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 

ಬಟ್ಲರ್ ಹೊರತುಪಡಿಸಿದರೆ ಬೇರೆ ಯಾವುದೇ ಬ್ಯಾಟ್ಸ್ ಮನ್ ಗಳೂ ಈ ಪಂದ್ಯದಲ್ಲಿ ಚೆನ್ನೈ ಬೌಲಿಂಗ್ ನ್ನು ಸಮರ್ಥವಾಗಿ ಎದುರಿಸಲಿಲ್ಲ. ಇನ್ನು 10 ಪಂದ್ಯಗಳಲ್ಲಿ 7ನೇ ಸೋಲನ್ನು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆ ಇದೇ ಮೊದಲ ಬಾರಿಗೆ ಪ್ಲೇ ಆಫ್ ಕನಸು ಭಗ್ನಗೊಂಡಿದೆ. 

SCROLL FOR NEXT