ಕ್ರಿಕೆಟ್

ಐಪಿಎಲ್ ನೀತಿ ಉಲ್ಲಂಘಿಸಿದ ಕೆಕೆಆರ್ ನ ರಾಹುಲ್ ತ್ರಿಪಾಠಿಗೆ ಖಂಡನೆ

Nagaraja AB

ಅಬು ದಾಬಿ: ಭಾನುವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನೀತಿ ಉಲ್ಲಂಘಿಸಿದ  ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ರಾಹುಲ್ ತ್ರಿಪಾಠಿಯ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.

ಲೆವೆಲ್ 1ರಲ್ಲಿ 2.3ರ ನೀತಿ ಸಂಹಿತೆ ಉಲ್ಲಂಘಿಸಿರುವುದನ್ನು ರಾಹುಲ್ ತ್ರಿಪಾಠಿ ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಅಪರಾಧದ ಸ್ವರೂಪವನ್ನು ಐಪಿಲ್ ಒದಗಿಸಿಲ್ಲ.

ಲೆವೆಲ್ 1ರ ನೀತಿ ಸಂಹಿತೆ ಉಲ್ಲಂಘನೆಗಾಗಿ ಪಂದ್ಯದ ರೆಫ್ರಿಯ ನಿರ್ಧಾರ ಅಂತಿಮವಾಗಿರುತ್ತದೆ.ನಿಗದಿತ 20 ಓವರ್ ನಲ್ಲಿ ಪಂದ್ಯ ಟೈ ಆದ ಬಳಿಕ ಸೂಪರ್ ಓವರ್ ಮೂಲಕ ಕೆಕೆಆರ್ ಪಂದ್ಯವನ್ನು ಗೆದ್ದುಕೊಂಡಿತು.

SCROLL FOR NEXT