ಕ್ರಿಕೆಟ್

ಸೋಲಿನ ಸುಳಿಯಲ್ಲಿರುವ ಸಿಎಸ್‌ಕೆಗೆ ಮತ್ತೊಂದು ಆಘಾತ: ಐಪಿಎಲ್ ನಿಂದ ಡ್ವೇನ್‌ ಬ್ರಾವೊ ನಿರ್ಗಮನ

Raghavendra Adiga

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಟೀಂನ ಆಲ್ ರೌಂಡರ್  ಡ್ವೇನ್‌ ಬ್ರಾವೊ ಗಾಯದ ಸಮಸ್ಯೆಯ ಕಾರಣದಿಂದ ಇಲ್ಲಿ ನಡೆಯುತ್ತಿರುವ ಐಪಿಎಲ್ ಸರಣಿಯಿಂದ ಹೊರನಡೆದಿದ್ದಾರೆ, ಈಗಾಗಲೇ ಸೋಲಿನ ಆಘಾತವನ್ನು ಅನುಭವಿಸುತ್ತಿರುವ ತಂಡಕ್ಕೆ ಬ್ರಾವೊ  ಅಕಾಲಿಕ ನಿರ್ಗಮನ ಮತ್ತೊಂದು ಹೊಡೆತ ನೀಡಿದೆ. 

37 ವರ್ಷದ ಬ್ರಾವೊ  ಎಸ್‌ಕೆ ತಂಡದ ಅವಿಭಾಜ್ಯ ಅಂಗವಾಗಿದ್ದು, ಅಕ್ಟೋಬರ್ 17 ರಂದು ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಅಂತಿಮ ಓವರ್ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ.

ಬ್ರಾವೊ  ಬದಲಿಗೆ ಬೌಲಿಂಗ್ ಮಾಡಿದ್ದ ರವೀಂದ್ರ ಜಡೇಜಾ ಮೂರು ಸಿಕ್ಸರ್‌ ಸೇರಿ ಇಪ್ಪತ್ತಕ್ಕೂ ಹೆಚ್ಚು ರನ್ ಗಳನ್ನು ಬಿಟ್ಟುಕೊಟ್ಟು ಟೀಂಗೆ ದುಬಾರಿಯಾಗಿದ್ದರು.

ತೊಡೆಸಂದು ಗಾಯದಿಂದಾಗಿ ಬ್ರಾವೊ  ಐಪಿಎಲ್‌ನಿಂದ ಹೊರಗುಳಿಯುತ್ತಾರೆ ಎಂದು  ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಪಿಟಿಐಗೆ ತಿಳಿಸಿದ್ದಾರೆ.

ಬ್ರಾವೋ ಆರು ಪಂದ್ಯಗಳನ್ನು ಆಡಿ ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ ಏಳು ರನ್ ಗಳಿಸಿದರು. ಅವರು 8.57 ರ ಸರಾಸರಿಯಲ್ಲಿ ಪಂದ್ಯಗಳಲ್ಲಿ ಒಟ್ಟು ಆರು ವಿಕೆಟ್ ಪಡೆದರು.

10 ಪಂದ್ಯದ ಪೈಕಿ ಏಳು ಪಂದ್ಯ ಸೋತ ನಂತರ  ಸಿಎಸ್‌ಕೆ ಈ ಐಪಿಎಲ್ ನಲ್ಲಿ ಇದಾಗಲೇ ಸೋಲಿನ ದವಡೆಗೆ ಸಿಕ್ಕಿದೆ. ಅವರು ಪ್ರಸ್ತುತ ಲೀಗ್ ಅಂಕಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿದ್ದಾರೆ. 

ಹಿರಿಯ ಆಟಗಾರರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರ ಅನುಪಸ್ಥಿತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಆಘಾತಕ್ಕೊಳಗಾಗಿದ್ದು  ಈಗ ಬ್ರಾವೋ ನಿರ್ಗಮನ ತಂಡಕ್ಕೆ ಮತ್ತಷ್ಟು ಕಹಿಯನ್ನುಂಟು ಮಾಡಿದೆ. ಈ ಮುನ್ನ ಹೊರನಡೆದ ಇಬ್ಬರೂ ಆಟಗಾರರು  ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಮನೆಗೆ ಮರಳಿದ್ದರು.

SCROLL FOR NEXT