ಐಪಿಎಲ್: ಗೇಲ್ ಅಬ್ಬರದ ಆಟ ವ್ಯರ್ಥ, ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ 7 ವಿಕೆಟ್ ಭರ್ಜರಿ ಜಯ
13ನೇ ಆವೃತ್ತಿ ಐಪಿಎಲ್ ನ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಗಳ ಜಯ ಸಾಧಿಸಿದೆ.
ಅಬುದಾಬಿ: 13ನೇ ಆವೃತ್ತಿ ಐಪಿಎಲ್ ನ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಗಳ ಜಯ ಸಾಧಿಸಿದೆ.
ಪಂಜಾಬ್ ನೀಡಿದ್ದ ಸವಾಲಿನ ಮೊತ್ತದ ಗಿರಿ ಬೆನ್ನತ್ತಿದ ರಾಜಸ್ಥಾನ ಪರ ಬೆನ್ ಸ್ಟೋಕ್ಸ್ ಅರ್ಧಶತಕ(50 ರನ್ 26 ಎಸೆತ), ಸಂಜು ಸ್ಯಾಮ್ಸನ್ (48) ಮತ್ತು ಸ್ಟೀವನ್ ಸ್ಮಿತ್ (31* )ನೆರವಿನಿಂದ ಜಯ ಗಳಿಸಿದೆ.
ಟಾಸ್ ಸೋತ ಪಂಜಾಬ್ ತಂಡ ಮೊದಲು ಬ್ಯಾಟ್ ಮಾಡಿದ್ದು ಕ್ರಿಸ್ ಗೇಲ್ ಅವರ ಅಬ್ಬರದ ಆಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡಕ್ಕೆ 189 ರನ್ ಗಳ ಗುರಿಯನ್ನು ನೀಡಿತ್ತು. ಪಂಜಾಬ್ 20 ಓವರ್ ಗಳಲ್ಲಿ 4 ವಿಕೆಟ್ ಗೆ 185 ರನ್ ಗಳಿಸಿತ್ತು.
ಪಂಜಾಬ್ ಪರ ಗೇಲ್ 99 , ಕೆ.ಎಲ್.ರಾಹುಲ್ 46, ಪೂರನ್ 22 ರನ್ ಗಳಿಸಿದ್ದರು.
ಇಂದಿನ ಗೆಲುವಿನೊಂದಿಗೆ ರಾಜಸ್ಥಾನ ಪ್ಲೇಆಫ್ಗಾಗಿ 13 ಪಂದ್ಯಗಳಿಂದ 12 ಅಂಕಗಳೊಂದಿಗೆ ಆರನೇ ಜಯ ಸಾಧಿಸಿದರೆ, ಪಂಜಾಬ್ ಇನ್ನೂ 4 ನೇ ಸ್ಥಾನದಲ್ಲಿದೆ ಮತ್ತು ಅಗ್ರ ಎರಡು ಸ್ಥಾನಗಳಲ್ಲಿ ಅವಕಾಶ ಪಡೆಯುವ ಸಾಧ್ಯತೆ ಮಂಕಾಗಿದೆ.
ಈಗ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಪೈಕಿ ಒಂದು ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲಿದೆ.
ಗೇಲ್ ಹೊಸ ದಾಖಲೆ
ಕ್ರಿಸ್ ಗೇಲ್ ಈ ಪಂದ್ಯದ ಮೂಲಕ ಟಿ-20ಯಲ್ಲಿ ಮೊದಲ ಬಾರಿಗೆ 1 ಸಾವಿರ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ. ಇಂದು ಅವರು ಒಟ್ಟೂ ಎಂಟು ಸಿಕ್ಸರ್ ಸಿಡಿಸಿದ್ದರು. ಗೇಲ್ 63 ಎಸೆತದಲ್ಲಿ ಆರು ಬೌಂಡರಿ ಮತ್ತು ಎಂಟು ಸಿಕ್ಸರ್ ಸೇರಿ 99 ರನ್ ಗಳಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.