ಕ್ರಿಸ್ ಗೇಯ್ಲ್ 
ಕ್ರಿಕೆಟ್

ಔಟ್ ಆಗಿದ್ದಕ್ಕೆ ಮೈದಾನದಲ್ಲೇ ಬ್ಯಾಟ್ ಎಸೆದು ಗೇಯ್ಲ್ ಹುಚ್ಚಾಟ, ಕ್ರಿಸ್ ಗೆ ಬಿತ್ತು ಭಾರೀ ದಂಡ, ವಿಡಿಯೋ!

ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 30ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್  ತಂಡದ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಕೇವಲ 63 ಎಸೆತಗಳಲ್ಲಿ 99 ರನ್ ಸಿಡಿಸಿದ್ದರು.

ಅಬುಧಾಬಿ: ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 30ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್  ತಂಡದ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಕೇವಲ 63 ಎಸೆತಗಳಲ್ಲಿ 99 ರನ್ ಸಿಡಿಸಿದ್ದರು.

6 ಫೋರ್ಸ್, 8 ಸಿಕ್ಸರ್ ಒಳಗೊಂಡ 99 ರನ್ ಬಾರಿಸಿ ಶತಕದ ಸಮೀಪದಲ್ಲಿದ್ದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, 19.4ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್ ಎಸೆತಕ್ಕೆ ಬೌಲ್ಡ್ ಆದರು. ಶತಕದ ಸಮೀಪದಲ್ಲಿ ಔಟಾಗಿದ್ದಕ್ಕೆ ಹತಾಶೆಗೊಂಡ ಗೇಲ್, ಬ್ಯಾಟನ್ನು ನೆಲಕ್ಕೆ ಬಡಿದು ಬೇಸರ ವ್ಯಕ್ತಪಡಿಸಿದ್ದರು. ಐಪಿಎಲ್ ಇತಿಹಾಸದಲ್ಲೇ ಇಂತಹ ಅಸಭ್ಯ ತೋರಿದ್ದು, ಗೇಲ್ ಇದೇ ಮೊದಲು ಎನ್ನಲಾಗಿದೆ.

ಮೈದಾನದಲ್ಲಿ ಹುಚ್ಚಾಟ ನಡೆಸಿದ್ದರಿಂದ ಗೇಯ್ಲ್ ಗೆ ಪಂದ್ಯದ ಸಂಭಾವನೆಯಲ್ಲಿ ಶೇಕಡ 10ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ ನ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.2 ಅನ್ನು ಕ್ರಿಸ್ ಗೇಯ್ಲ್ ಒಪ್ಪಿಕೊಂಡಿದ್ದರು. 

ಇನ್ನು ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯ ಸೋಲಿನ ಹೊರತಾಗಿಯೂ ಕಿಂಗ್ಸ್ ಇಲೆವೆನ್ ಪಂಜಾಬ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು ಪ್ಲೇ ಆಫ್ ರೇಸ್ ನಲ್ಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಅಸ್ಸಾಂ ವಿಧಾನಸಭೆಯಲ್ಲಿ ಹೈಡ್ರಾಮ: ವಿಪಕ್ಷಗಳ ಪ್ರತಿಭಟನೆ ನಡುವೆಯೇ UCC ಮಸೂದೆ ಅಂಗೀಕಾರ! ಬಹು ಪತ್ನಿತ್ವಕ್ಕೆ ಜೈಲು ಶಿಕ್ಷೆ

ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಇಲ್ಲ ಪರಿಣಾಮ ಎದುರಿಸಬೇಕಾಗುತ್ತದೆ: ಕಾಂಗ್ರೆಸ್ ಗೆ 'ಅಹಿಂದ' ಎಚ್ಚರಿಕೆ

ಚಿತ್ರದುರ್ಗ: ನಿಂತಿದ್ದ ಲಾರಿಗೆ ಬೊಲೆರೋ ಡಿಕ್ಕಿ; ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದುರ್ಮರಣ

SCROLL FOR NEXT