ದುಬೈ: ಐದು ತಿಂಗಳ ಕೊರೋನಾ ಪ್ರೇರಿತ ವಿರಾಮದ ಬಳಿಕ ರ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದ ಸದಸ್ಯರ ಫಿಟ್‌ನೆಸ್ ಮಟ್ಟದ ಬಗ್ಗೆಸಂತಸ ವ್ಯಕ್ತಪಡಿಸಿದ್ದಾರೆ, ಸೆಪ್ಟೆಂಬರ್ 19 ರಿಂದ ಐಪಿಎಲ್ ಪ್ರಾರಂಭವಾಗುವ ಮುನ್ನ "ಎಲ್ಲರೂ ಉತ್ತಮ ಫಿಟ್‌ನೆಸ್ ಹೊಂದಿದ್ದಾರೆ" ಎಂದು ಹೇಳಿದರು.
ಯುಎಇಗೆ ಆಗಮಿಸಿದ ನಂತರ ಮೊದಲ ತರಬೇತಿಯಿಂದ ಸ್ವತಃ ಉತ್ಸಾಹ ಇಮ್ಮಡಿಸಿದೆ ಎಂದ ಕೊಹ್ಲಿ "ಫಿಟ್‌ನೆಸ್ ದೃಷ್ಟಿಕೋನದಿಂದ ಎಲ್ಲರೂ ಉತ್ತಮವಾಗಿ ಕಾಣುತ್ತಿದ್ದಾರೆ, ಎಲ್ಲರೂ ಉತ್ತಮ ಸ್ಥಿತಿಯಲ್ಲಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಮೊದಲ ಬಾರಿಯ ತರಬೇತಿಯಿಂದ ನನಗೂ ಸಾಕಷ್ಟು ಒಳಿತಾಗಿದೆ. ಎಂದು ಕೊಹ್ಲಿ ಆರ್ಸಿಬಿಯ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
"ನಿಸ್ಸಂಶಯವಾಗಿ ಸರಿಯಾಗಬೇಕಾದ ಕೆಲ ವಿಚಾರಗಳಿದೆ. ಒಮ್ಮೆ ನಿಮ್ಮ ಅತ್ಯುತ್ತಮ ಮನಸ್ಸನ್ನು ಮುಟ್ಟಿದ ಬಳಿಕ ನೀವು ಸ್ಪರ್ಧೆಯನ್ನು ಪ್ರವೇಶಿಸಿದರೆ ನೀವು ಸಾಧ್ಯವಾದಷ್ಟು ಮುಂದಿನ ಹಂತದವರೆಗೆ ಉಳಿಯಲು ಸಾಧ್ಯವಾಗಲಿದೆ" ಯುಎಇಯಲ್ಲಿ ಎರಡು ವಾರಗಳ ತರಬೇತಿ ಅವಧಿಯಲ್ಲಿ ತಂಡದ ನಿರ್ವಹಣೆಯತ್ತ ಗಮನ ಹರಿಸಿದ್ದು ಆಟಗಾರರಿಗೆ ಗಾಯವಾಗುವುದನ್ನು ತಪ್ಪಿಸಲು ಸಮತೋಲಿತ ವಿಧಾನ ಅನುಸರಿಸಲಾಗಿದೆ. "ನಾವು ಯಾರನ್ನೂ ಮುಜುಗರಕ್ಕೆ ಅಥವಾ ಗಾಯಕ್ಕೆ ತಳ್ಳಲು ಬಯಸುವುದಿಲ್ಲ ಏಕೆಂದರೆ ಅದು ಆಟಕ್ಕೆ ಅಡ್ಡಿಯಾಗಲಿದೆ. ಆದ್ದರಿಂದ ನಾವು ಸಮತೋಲಿತ ರೀತಿಯಲ್ಲಿ ಮುಂದೆ ಸಾಗಿದ್ದೇವೆ"
"ಆರು ದಿನಗಳಲ್ಲಿ 6 ಸೆಷನ್‌ಗಳನ್ನು ಮಾಡುವಂತಹ ಹುಚ್ಚು ಸಾಹಸ ಮಾಡಲು ನಾನು ಬಯಸುವುದಿಲ್ಲ. ನಾವು ತಂಡದ ಸದಸ್ಯರಿಗೆ ಸಾಕಷ್ಟು ಸಮಯವನ್ನು ನೀಡಿದ್ದೇವೆ, ಈ ಮುಂದಿನ ಕೆಲವು ತರಬೇತಿ ಅವಧಿಗಳಲ್ಲಿಯೂ ನಾವು ಇದನ್ನು ಮುಂದುವರಿಸುತ್ತೇವೆ" ಎಂದು ಕೊಹ್ಲಿ ಹೇಳಿದರು.ದೀರ್ಘ ವಿರಾಮದ ನಂತರ, ನಿಧಾನವಾಗಿ ಪ್ರಾರಂಭಿಸುವುದು ಮತ್ತು ತರಬೇತಿ ಅವಧಿಗಳ ತೀವ್ರತೆಯನ್ನು ಕ್ರಮೇಣ ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ. ಇದನ್ನು ಆರ್‌ಸಿಬಿ ಈಗ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ತಂಡವು ಐಪಿಎಲ್ ಗೆ ಹೇಗೆ ತಯಾರಾಗುತ್ತಿದೆ ಎನ್ನುವುದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ "ನಾವು ಕೆಲವು ತಿಂಗಳುಗಳ ನಂತರ ಸೇರಿದ್ದ ಕಾರಣ ಆರಂಭದಲ್ಲಿ ಭುಜದ ನೋವು ಕಾಣಿಸಿಕೊಂಡಿದೆ. ಇದ್ದಕ್ಕಿದ್ದಂತೆ ಕೆಲವು ಸ್ನಾಯುಗಳು ನೋಯುತ್ತಿದೆ. . ಆದರೆ ಟೀಂ ನ ಸದಸ್ಯರಿಗೆ ಈಗ ನಾವು ಬಯಸುವ ತೀವ್ರತೆಯ ಮಟ್ಟಕ್ಕೆ ಮರಳುತ್ತಿರುವುದರ ಅರಿವಾಗುತ್ತಿದೆ. " ಕೊಹ್ಲಿ ಹೇಳೀದ್ದಾರೆ.
ಆರ್‌ಸಿಬಿ ಸೆಪ್ಟೆಂಬರ್ 21 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಈ ಋತಿವಿನಲ್ಲಿ ಯುಎಇ ಮೂರು ಸ್ಥಳಗಳಾದದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಐಪಿಎಲ್ ನಡೆಯಲಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಪಂದ್ಯಾವಳಿಯನ್ನು ಭಾರತದಿಂದ ಹೊರಗೆ ನಡೆಸಲು ತೀರ್ಮಾನಿಸಲಾಗಿದೆ.