ಕ್ರಿಕೆಟ್

ಐಪಿಎಲ್ 2020: ಆರ್‌ಸಿಬಿ ತಂಡದ ತರಬೇತಿಗೆ ಯುಎಇ ನಾಯಕ ಅಹ್ಮದ್ ರಾಜಾ ನೆರವು!

Vishwanath S

ದುಬೈ: ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್ ವಿದೇಶದಲ್ಲಿ ನಡೆಯಲಿದೆ. ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಟೂರ್ನಿ ಪ್ರಾರಂಭವಾಗಲಿದೆ. ಇನ್ನು ಅದಾಗಲೇ ಯುಎಇ ತಲುಪಿರುವ ಐಪಿಎಲ್ ಪ್ರಾಂಚೈಸಿ ತಂಡಗಳು ಸತತ ಅಭ್ಯಾಸದಲ್ಲಿ ತೊಡಗಿವೆ. 

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಸಹ ಸತತ ಅಭ್ಯಾಸದಲ್ಲಿ ತೊಡಗಿದೆ. ಯುಎಇಯಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಆರ್‌ಸಿಬಿಯು ಸ್ಥಳೀಯ ಆಟಗಾರನ ನೆರವು ಪಡೆಯಲಿದೆ. ಹೌದು ಯುಎಇ ತಂಡದ ನಾಯಕ ಅಹ್ಮದ್ ರಾಜಾ ಮತ್ತು ಕಾರ್ತಿಕ್ ಮೇಯಪ್ಪನ್ ಅವರನ್ನು ತರಬೇತುದಾರರಾಗಿ ತೆಗೆದುಕೊಂಡಿದೆ. 

ಸ್ಥಳೀಯ ಆಟಗಾರರಿಗೆ ಮೈದಾದನದ ಬಗ್ಗೆ ಹೆಚ್ಚು ಮಾಹಿತಿ ಇರುತ್ತದೆ. ಹೀಗಾಗಿ ಯುಎಇ ತಂಡದ ಇಬ್ಬರು ಆಟಗಾರರನ್ನು ಆರ್‌ಸಿಬಿ ತೆಗೆದುಕೊಂಡಿದೆ. ಕಾರ್ತಿಕ್ ಮೇಯಪ್ಪನ್ ಯುಎಇ ತಂಡದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಬೌಲಿಂಗ್ ಗಾಗಿ ಬಳಸಿಕೊಳ್ಳಗುತ್ತಿದೆ.

ಎಡಗೈ ಸ್ಪಿನ್ನರ್ ಆಗಿರುವ ರಾಜಾ ಅವರನ್ನು ಆರ್ಸಿಬಿ ಬೌಲಿಂಗ್ ಕೋಚ್ ಶ್ರೀಧರನ್ ಶ್ರೀರಾಮ್ ಶಿಫಾರಸ್ಸು ಮಾಡಿದ್ದು ಅವರು ಆರ್‌ಸಿಬಿ ಶಿಬಿರಕ್ಕೆ ಬಂದಿದ್ದಾರೆ.

SCROLL FOR NEXT