ಕ್ರಿಕೆಟ್

ಐಸಿಸಿ ಕೇಂದ್ರ ಕಚೇರಿಗೂ ಒಕ್ಕರಿಸಿದ ಕೊರೋನಾ ವೈರಸ್, ಕಚೇರಿ ತಾತ್ಕಾಲಿಕ ಬಂದ್

Srinivasamurthy VN

ನವದೆಹಲಿ: ಜಗತ್ತಿನ 213 ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಕೇಂದ್ರ ಕಚೇರಿಗೂ ಒಕ್ಕರಿಸಿದ್ದು, ಕಚೇರಿಯ ಸಿಬ್ಬಂದಿಗಳಲ್ಲಿ ಕೊವಿಡ್ ಸೋಂಕು ಕಂಡುಬಂದಿದೆ.

ದುಬೈನಲ್ಲಿರುವ ಐಸಿಸಿ ಕೇಂದ್ರ ಕಚೇರಿಯಲ್ಲಿ ಕೆಲ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇದೇ ಕಾರಣಕ್ಕೆ ಐಸಿಸಿ ಕೇಂದ್ರ ಕಚೇರಿಯನ್ನು ಮುಂದಿನ ಕೆಲ ದಿನಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ. ಅಲ್ಲದೆ ಕಚೇರಿಯನ್ನು ಸ್ಯಾನಿಟೈಸ್ ಮಾಡಲು ನಿರ್ಧರಿಸಲಾಗಿದೆ.

ಐಪಿಎಲ್ ಮೇಲೆ ಕರಿನೆರಳು
ಇನ್ನು ದುಬೈ ಐಸಿಸಿ ಕೇಂದ್ರ ಕಚೇರಿಯಲ್ಲಿನ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ದೃಢವಾಗುತ್ತಿದ್ದಂತೆಯೇ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ ಮೇಲೂ ಕರಿಛಾಯೆ ಮೂಡಿದೆ. ಆದರೆ ಯುಎಇ ಕ್ರಿಕೆಟ್ ಆಡಳಿತ ಮಂಡಳಿ ಮತ್ತು ಯುಎಇ ಸರ್ಕಾರ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಇದರಿಂದ ಐಪಿಎಲ್ ತಂಡಗಳು ಸುರಕ್ಷಿಕ ಪರಿಸರದಲ್ಲಿ ಆಟವಾಡುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಪಿಎಲ್ ತಂಡಗಳು ಉಳಿದುಕೊಂಡಿರುವ ಹೊಟೆಲ್ ಗಳು, ಮೈದಾನಗಳು ಮತ್ತು ಪ್ರಾಕ್ಟಿಸ್ ನೆಟ್ ಜಾಗಗಳೆಲ್ಲವೂ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಆಗಿಂದಾಗ್ಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು  ಹೇಳಿದ್ದಾರೆ. ಪ್ರಸ್ತುತ ಸ್ಥಳೀಯ ಮುಂಜಾಗ್ರತಾ ನಿಯಮಗಳ ಅನ್ವಯ ಸೋಂಕಿಗೆ ತುತ್ತಾಗಿರುವ ಐಸಿಸಿ ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SCROLL FOR NEXT