ಕ್ರಿಕೆಟ್

ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆಯುವುದು ನನ್ನ ಕನಸು: ಆರ್ ಸಿಬಿ ಬೌಲರ್ ಮೊಹಮ್ಮದ್ ಸಿರಾಜ್

Nagaraja AB

ಚೆನ್ನೈ: ಟೀಂ ಇಂಡಿಯಾ ಅತಿ ಹೆಚ್ಚಿನ ವಿಕೆಟ್ ಪಡೆಯುವುದು ತನ್ನ ಕನಸಾಗಿದೆ ಎಂದು ಉದಯೋನ್ಮುಖ ವೇಗಿ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ. 2017 ನವೆಂಬರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಚೊಚ್ಚಲ ಟಿ-20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ 27 ವರ್ಷದ ಸಿರಾಜ್, ಈವರೆಗೂ ಐದು ಟೆಸ್ಟ್, ಒಂದು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನಾಡಿದ್ದಾರೆ.

ಸಿರಾಜ್ , ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಆಡಲಿದ್ದಾರೆ. ಎಲ್ಲಾ ಮೂರು ಮಾದರಿಗಳಲ್ಲಿ ಆಡಲು ಬಯಸುತ್ತೇನೆ. ಯಶಸ್ಸಿನ ಕ್ರೆಡಿಟ್ ನ್ನು ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಮತ್ತು ಇಶಾಂತ್ ಶರ್ಮಾ ಅವರಿಗೆ ಸಲ್ಲಿಸಲು ಬಯಸುವುದಾಗಿ ಅವರು ಹೇಳಿದ್ದಾರೆ. 

ನಾನು ಬೌಲಿಂಗ್ ಮಾಡುವಾಗಲೆಲ್ಲಾ ಜಸ್ಪ್ರೀತ್ ಬುಮ್ರಾ ನನ್ನ ಪಕ್ಕದಲ್ಲಿ ನಿಲ್ಲುತ್ತಿದ್ದರು. ಬೇಸಿಕ್ ಗೆ ಅಂಟಿಕೊಳ್ಳಬೇಕು, ಹೆಚ್ಚುವರಿ ಏನನ್ನು ಮಾಡಬಾರದೆಂದು ಹೇಳುತ್ತಿದ್ದರು. ಅಂತಹ ಅನುಭವಿ ಆಟಗಾರನಿಂದ ಕಲಿತಿರುವುದಕ್ಕೆ ಸಂತೋಷವಾಗಿದೆ ಎಂದು ಸಿರಾಜ್ ಹೇಳಿರುವ ವಿಡಿಯೋವೊಂದನ್ನು ಆರ್ ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಸ್ಟ್ ಮಾಡಿದೆ.

ಇಶಾಂತ್ ಶರ್ಮಾ ಅವರೊಂದಿಗೂ ಆಟವಾಡಿದ್ದೇನೆ. ಅವರು 100 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಡ್ರೆಸ್ಸಿಂಗ್ ರೂಮ್ ನಲ್ಲಿ ಉತ್ತಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ. ಭಾರತದ ಪರ ಅತಿ ಹೆಚ್ಚಿನ ವಿಕೆಟ್ ಪಡೆಯುವುದು ನನ್ನ ಗುರಿಯಾಗಿದೆ. ಅವಕಾಶ ಸಿಕ್ಕಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುವುದಾಗಿ ಅವರು ಹೇಳಿದ್ದಾರೆ.

ಆರ್ ಸಿಬಿಯ ಪ್ರಮುಖ ವೇಗಿ 35 ಐಪಿಲ್ ಪಂದ್ಯಗಳಲ್ಲಿ 39 ವಿಕೆಟ್ ಪಡೆದಿದ್ದಾರೆ. ಕಳೆದ ವರ್ಷ ತಾನೂ ಐಪಿಎಲ್ ಗೆ ಸೇರಿದಾಗ ಕಡಿಮೆ ಪ್ರಮಾಣದ ವಿಶ್ವಾಸವಿತ್ತು. ಆದರೆ. ಕೆಕೆಆರ್ ವಿರುದ್ಧದ ಪ್ರದರ್ಶನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಆರ್‌ಸಿಬಿಯ ಬ್ಯಾಟಿಂಗ್ ಸಲಹೆಗಾರ ಸಂಜಯ್ ಬಂಗಾರ್ ಅವರಿಂದ ಉತ್ತಮ ಪ್ರತಿಕ್ರಿಯೆ ಪಡೆದ ನಂತರ ತಮ್ಮ ಆಕ್ರಮಣಕಾರಿ ಬೌಲಿಂಗ್ ಮುಂದುವರಿಸಲು ನೋಡುತ್ತೇನೆ ಎಂದು ಸಿರಾಜ್ ಹೇಳಿದ್ದಾರೆ.

SCROLL FOR NEXT