ಕ್ರಿಕೆಟ್

ಐಪಿಎಲ್ 2021: ನಾಳೆ ಚೆನ್ನೈ-ದೆಹಲಿ ಮುಖಾಮುಖಿ

Vishwanath S

ಚೆನ್ನೈ: ಶನಿವಾರ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ ) ಮತ್ತು ದೆಹಲಿ ಕ್ಯಾಪಿಟಲ್ಸ್(ಡಿಸಿ) ತಂಡಗಳು ಕಾದಾಟ ನಡೆಸಲಿವೆ.

ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ದೆಹಲಿ ನಾಯಕ ರಿಷಭ್ ಪಂತ್ ಅವರ ನಡುವಿನ ಕಾದಾಟ ರೋಚಕತೆ ಹುಟ್ಟಿಸಿದೆ. ದೆಹಲಿಯ ತಂಡ ಕಳೆದ ಆವೃತ್ತಿಯ ಫೈನಲ್ ತಲುಪಿದರೆ, ಸಿಎಸ್ ಕೆ ತಂಡ ಏಳನೇ ಸ್ಥಾನದಲ್ಲಿತ್ತು.

ದೆಹಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಎಡ ಭುಜಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ದೆಹಲಿ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಕೊರೋನಾದಿಂದ ಸೋಂಕಿಗೆ ಒಳಗಾಗಿದ್ದಾರೆ. ಅಯ್ಯರ್ ಗಾಯದಿಂದಾಗಿ ಟೂರ್ನಾಮೆಂಟ್‌ನಿಂದ ಹೊರಗುಳಿದ ನಂತರ ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ದೆಹಲಿ ತಂಡದ ಹೊಸ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಪಂತ್ ತಮ್ಮ ತಂಡಕ್ಕೆ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ತೋರಿಸಿದ್ದಾರೆ. ಆದರೆ ಮಹೇಂದ್ರ ಸಿಂಗ್ ಧೋನಿ ಎದುರು ಅವರು ಹೇಗೆ ಪ್ರದರ್ಶನ ನೀಡಲು ಸಮರ್ಥರಾಗಿದ್ದಾರೆ ಎಂಬುದನ್ನು ನೋಡಲು ತುಂಬಾ ಆಸಕ್ತಿದಾಯಕವಾಗಿದೆ.

ದೆಹಲಿ ತಂಡದ ಕಗಿಸೊ ರಬಾಡಾ ಮತ್ತು ಎನ್ರಿಚ್ ನಾರ್ಟ್ಜೆ ಮುಂಬೈನ ದೆಹಲಿ ತಂಡದ ಹೋಟೆಲ್ ತಲುಪಿದ್ದು, ಮೊದಲ ಪಂದ್ಯದಲ್ಲಿ ಅವರು ಆಡುವುದಿಲ್ಲ. ಕಳೆದ ಬಾರಿ ಈ ಸ್ಟಾರ್ ಆಟಗಾರರ ಪ್ರದರ್ಶನದ ಬಲದಿಂದ ದೆಹಲಿ ಫೈನಲ್ ಗೆ ತಲುಪಿತ್ತು. 
ಮೊದಲ ಪಂದ್ಯದಲ್ಲಿ ಆಡುವ ಹನ್ನೊಂದು ಜನರನ್ನು ಆಯ್ಕೆ ಮಾಡುವುದು ದೆಹಲಿ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. 

ಚೆನ್ನೈ ತಂಡದಲ್ಲಿ ಧೋನಿ ಅಲ್ಲದೆ, ಮೊಯಿನ್ ಅಲಿ, ಕೆ.ಎಂ.ಆಸಿಫ್, ಡ್ವೇನ್ ಬ್ರಾವೋ, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಕೃಷ್ಣಪ್ಪ ಗೌತಮ್, ಇಮ್ರಾನ್ ತಾಹಿರ್, ಋತುರಾಜ್ ಗಾಯಕವಾಡ್, ರವೀಂದ್ರ ಜಡೇಜಾ, ಲುಂಗಿ ಗಿಡಿ, ಅಂಬಟಿ ರಾಯುಡು, ಚೇತೇಶ್ವರ ಪೂಜಾರ , ಶಾರ್ದುಲ್ ಠಾಕೂರ್ ಮತ್ತು ರಾಬಿನ್ ಉತ್ತಪ್ಪ ಅವರಂತಹ ಅನೇಕ ಪ್ರಬಲ ಆಟಗಾರರು ತಂಡಕ್ಕೆ ಬಲ ತುಂಬಿದ್ದಾರೆ.

ಪಂತ್ ಅವರಲ್ಲದೆ, ರವಿ ಚಂದ್ರನ್ ಅಶ್ವಿನ್, ಅವೇಶ್ ಖಾನ್, ಸ್ಯಾಮ್ ಬಿಲ್ಲಿಂಗ್ಸ್, ಟಾಮ್ ಕರೆನ್, ಶಿಖರ್ ಧವನ್, ಶಿಮ್ರಾನ್ ಹೆಟ್ಮಿಯರ್, ಅಮಿತ್ ಮಿಶ್ರಾ, ಎನ್ರಿಚ್ ನಾರ್ಟ್ಜೆ, ಅಕ್ಷರ್ ಪಟೇಲ್, ಕಗಿಸೊ ರಬಾಡ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ಪೃಥ್ವಿ ಶಾ, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೋಯಿನಿಸ್, ಕ್ರಿಸ್ ವೋಕ್ಸ್ ಮತ್ತು ಉಮೇಶ್ ಯಾದವ್ ತಂಡಕ್ಕೆ ಬಲ ತುಂಬ ಬಲ್ಲ ಆಟಗಾರರು.

SCROLL FOR NEXT