ಕ್ರಿಕೆಟ್

ಕಪಿಲ್, ಸಚಿನ್ ಬಳಿಕ ಪ್ರತಿಷ್ಠಿತ ವಿಸ್ಡನ್ ಅಲ್‌ಮನ್ಯಾಕ್ ಗೌರವಕ್ಕೆ ಪಾತ್ರರಾದ ವಿರಾಟ್ ಕೊಹ್ಲಿ!

Vishwanath S

ಲಂಡನ್: ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ಬಳಿಕ ವಿಸ್ಡನ್ ಅಲ್‌ಮನ್ಯಾಕ್ ದಶಕದ ಏಕದಿನ ಕ್ರಿಕೆಟಿಗ ಗೌರವಕ್ಕೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.

ವಿಸ್ಡನ್ ಅಲ್‌ಮನ್ಯಾಕ್ ಪ್ರತಿಷ್ಠಿತ ವಾರ್ಷಿಕ ಪುಸ್ತಕದಲ್ಲಿ ಕ್ರಿಕೆಟ್ ಕ್ಷೇತ್ರದ ಐತಿಹಾಸಿಕ ಘಟನೆಗಳನ್ನು ದಾಖಲಿಸಲಾಗುತ್ತದೆ. ಇನ್ನು 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ 254 ಏಕದಿನ ಪಂದ್ಯಗಳಲ್ಲಿ ಬರೋಬ್ಬರಿ 12,169 ರನ್ ಬಾರಿಸಿದ್ದಾರೆ. 

ವಿರಾಟ್ ಕೊಹ್ಲಿ 2011ರ ಏಕದಿನ ವಿಶ್ವಕಪ್ ವಿಜೇತ ಟೀಂ ಇಂಡಿಯಾ ಪರ ಆಡಿದ್ದರು. 60ರ ಸರಾಸರಿಯಲ್ಲಿ ರನ್ ಕಲೆಹಾಕಿರುವ ಅವರು 42 ಶತಕಗಳನ್ನು ಬಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದಶಕದ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ. 

ಈ ಹಿಂದೆ 1990ರಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈ ಗೌರವಕ್ಕೆ ಪಾತ್ರರಾಗಿದ್ದರು. ಇದಕ್ಕೆ ಮುನ್ನ ಅಂದರೆ 1980ರ ದಶಕದಲ್ಲಿ ಕಪಿಲ್ ದೇವ್ ಈ ಗೌರವಕ್ಕೆ ಪಾತ್ರರಾಗಿದ್ದರು. 1983ರಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾವನ್ನು ಕಪಿಲ್ ದೇವ್ ಮುನ್ನಡೆಸಿದ್ದರು.

SCROLL FOR NEXT