ಕ್ರಿಕೆಟ್

ಹೈದ್ರಾಬಾದಿನ ಮಾಜಿ ಕ್ರಿಕೆಟಿಗ ಅಶ್ವಿನ್ ಯಾದವ್ ನಿಧನ

Nagaraja AB

ಹೈದ್ರಾಬಾದ್: ಹೈದ್ರಾಬಾದಿನ ಮಾಜಿ ವೇಗಿ ಅಶ್ವಿನ್ ಯಾದವ್ ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ. ಅವರಿಗೆ 33 ವರ್ಷ ವಯಸ್ಸಾಗಿತ್ತು. ಯಾದವ್ ಹೆಂಡತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಅಶ್ವಿನ್ ಯಾದವ್ 14 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರು. ಮೊಹಾಲಿಯಲ್ಲಿ 2007ರಲ್ಲಿ  ಪಂಜಾಬ್ ವಿರುದ್ಧದ ಪಂದ್ಯದ ಮೂಲಕ ಚೊಚ್ಚಲ ರಣಜಿ ಟ್ರೋಪಿಯಲ್ಲಿ 34 ವಿಕೆಟ್ ಕಬಳಿಸಿದ್ದರು.

2008-09ರ ಋತುವಿನಲ್ಲಿ ಉಪ್ಪಾಳ್ ಕ್ರೀಡಾಂಗಣದಲ್ಲಿ ನಡೆದ ದೆಹಲಿ ವಿರುದ್ಧದ ಪಂದ್ಯದಲ್ಲಿ 52 ರನ್ ಗಳಿಗೆ ಆರು ವಿಕೆಟ್ ಗಳನ್ನು ಯಾದವ್ ಪಡೆದುಕೊಂಡಿದ್ದರು.2009ರಲ್ಲಿ ಮುಂಬೈ ವಿರುದ್ಧ ಆಡಿದ್ದ ಪಂದ್ಯವೇ ಅವರ ಕೊನೆಯ ರಣಜಿ ಟ್ರೋಫಿ ಪಂದ್ಯವಾಗಿದೆ. ಆದಾಗ್ಯೂ,ಎಸ್ ಬಿಐ ಹೈದ್ರಾಬಾದ್ ಮತ್ತು ಸ್ಥಳೀಯ ಲೀಗ್ ನಲ್ಲಿ ಎಸ್ ಬಿಐ ಪರವಾದ ಪಂದ್ಯಗಳಲ್ಲಿ ಆಡುವುದನ್ನು ಮುಂದುವರೆಸಿದ್ದರು. 10 ಎ ದರ್ಜೆಯ ಪಂದ್ಯಗಳು ಹಾಗೂ ಎರಡು ಟಿ-20 ಪಂದ್ಯಗಳಲ್ಲಿಯೂ ಯಾದವ್ ಆಡಿದ್ದರು.

ಅಶ್ವಿನ್ ಯಾದವ್ ಅವರ ನಿಧನಕ್ಕೆ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಸಂತಾಪ ಸೂಚಿಸಿದ್ದಾರೆ. 

SCROLL FOR NEXT