ಕ್ರಿಕೆಟ್

ಖ್ಯಾತ ಸಿಮೆಂಟ್ ಉದ್ಯಮಿ, ಸಿಎಸ್‌ಕೆ ಅಧ್ಯಕ್ಷ ಎಲ್. ಸಬರತ್ನಮ್ ನಿಧನ

Raghavendra Adiga

ಚೆನ್ನೈ: ಖ್ಯಾತ ಸಿಮೆಂಟ್ ಉದ್ಯಮಿ ಹಾಗೂ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಅಧ್ಯಕ್ಷ ಎಲ್ ಸಬರತ್ನಮ್ ಭಾನುವಾರ ಚೆನ್ನೈನಲ್ಲಿ ನಿಧನರಾದರು, ಅವರಿಗೆ 80 ವರ್ಷ ವಯಸ್ಸಾಗಿತ್ತು.

ಸಬರತ್ನಮ್ ಉದ್ಯಮ ವಲಯದಲ್ಲಿ ಚಿರಪರಿಚಿತರಾಗಿದ್ದರುಮತ್ತು ಮದ್ರಾಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ನಂತಹಾ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದರು.

ಚೆಟ್ಟಿನಾಡ್ ಸಿಮೆಂಟ್ ನ ಕಾರ್ಯನಿರ್ವಾಹಕ ನಿರ್ದೇಶಕ, ನೋರ್ಡ್ ಆಫ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿ., ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿ, ನಲ್ಲಿ ದೀರ್ಘಕಾಲದ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವರು ಇಂಡಿಯಾ ಸಿಮೆಂಟ್ಸ್‌ನ ಸಲಹೆಗಾರ,  ಕೋರಮಂಡಲ್ ಶುಗರ್ಸ್ ನನಿರ್ದೇಶಕರು ಮತ್ತು ಸಿಇಒ ಆಗಿದ್ದರು.

ಅವರು ಸಂಗೀತ ಅಕಾಡೆಮಿ, ಭಾರತೀಯ ವಿದ್ಯಾ ಭವನಗಳ ಪೋಷಕರಾಗಿದ್ದರು ಟಿ ಎಸ್ ನಾರಾಯಣಸ್ವಾಮಿ ಕಾಲೇಜಿನ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದಾರೆ ಅಣ್ಣಾಮಲೈ ಕಲೆ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ ಆಗಿದ್ದರು.

ಮೃತರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

SCROLL FOR NEXT