ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(ಬಲಕ್ಕೆ) ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (ಎಡಕ್ಕೆ) 
ಕ್ರಿಕೆಟ್

ಕೊರೋನಾ ಉಲ್ಬಣ: ಸ್ವದೇಶಕ್ಕೆ ಮರಳಲು ಎಲ್ಲಾ ವ್ಯವಸ್ಥೆ ಮಾಡುತ್ತೇವೆ, ಐಪಿಎಲ್ ವಿದೇಶಿ ಆಟಗಾರರಿಗೆ ಬಿಸಿಸಿಐ ಭರವಸೆ

ಕೊರೋನಾ ಎರಡನೇ ಅಲೆ ಹಿನ್ನಲೆಯಲ್ಲಿ ಭಾರತದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಇದರ ನಡುವೆ ಐಪಿಎಲ್ ಟೂರ್ನಿ ಸಹ ನಡೆಯುತ್ತಿದೆ. ಹೀಗಾಗಿ ಐಪಿಎಲ್ ನಲ್ಲಿ ಭಾಗಿಯಾಗಿರುವ ವಿದೇಶಿ ಆಟಗಾರರಿಗೆ ಬಿಸಿಸಿಐ ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸುವ ಭರವಸೆ ನೀಡಿದೆ. 

ನವದೆಹಲಿ: ಕೊರೋನಾ ಎರಡನೇ ಅಲೆ ಹಿನ್ನಲೆಯಲ್ಲಿ ಭಾರತದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಇದರ ನಡುವೆ ಐಪಿಎಲ್ ಟೂರ್ನಿ ಸಹ ನಡೆಯುತ್ತಿದೆ. ಹೀಗಾಗಿ ಐಪಿಎಲ್ ನಲ್ಲಿ ಭಾಗಿಯಾಗಿರುವ ವಿದೇಶಿ ಆಟಗಾರರಿಗೆ ಬಿಸಿಸಿಐ ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸುವ ಭರವಸೆ ನೀಡಿದೆ.

ಅದಾಗಲೇ ಮೂವರು ವಿದೇಶಿ ಕ್ರಿಕೆಟಿಗರು ಐಪಿಎಲ್ ಗೆ ಗುಡ್ ಬೈ ಹೇಳಿ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಿಸಿಸಿಐ ವಿದೇಶಿ ಆಟಗಾರರಿಗೆ ಸ್ಥೈರ್ಯ ತುಂಬಿದೆ. 

ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ತಮ್ಮ ತಮ್ಮ ದೇಶಕ್ಕೆ ಮರಳಲು ಆಟಗಾರರಿಗೆ ಏನೇನು ಸೌಲಭ್ಯ ನೀಡಬೇಕೋ ಅದೆಲ್ಲವನ್ನೂ ನಾವು ಒದಗಿಸುತ್ತೇನೆ. ಸ್ವದೇಶಕ್ಕೆ ಮರಳಲು ಬೇಕಾದ ವ್ಯವಸ್ಥೆ ಎಲ್ಲವನ್ನೂ ಮಾಡಿಕೊಡುತ್ತೇನೆ ಎಂದು ಬಿಸಿಸಿಐ ತಿಳಿಸಿದೆ. 

ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಬಹುತೇಕ ಕ್ರಿಕೆಟಿಗರು ಟೂರ್ನಿಯ ಮುಕ್ತಾಯದ ಬಳಿಕ ಮನೆಗೆ ಮರಳುವುದು ಹೇಗೆ ಎಂದು ಚಿಂತೆಗೀಡಾಗಿದ್ದೀರಿ ಎಂದು ತಿಳಿದಿದೆ. ಆದರೆ ಈ ಬಗ್ಗೆ ನೀವು ಆತಂಕ ಪಡುವ ಅಗತ್ಯವಿಲ್ಲ. ಸದ್ಯದ ಪರಿಸ್ಥಿತಿಯ ಬಗ್ಗೆ ಬಿಸಿಸಿಐ ಕೂಡ ಗಮನವಿರಿಸಿದೆ. ನೀವು ಸ್ವದೇಶಕ್ಕೆ ಮರಳಲು ಅಗತ್ಯ ವ್ಯವಸ್ಥೆಯನ್ನು ಸರ್ಕಾರದೊಂದಿಗೆ ವಿಚಾರ ಮಾಡಿದೆ ಎಂದು ಬಿಸಿಸಿಐ ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT