ಕ್ರಿಕೆಟ್

ಐಪಿಎಲ್ 2021: ಹರ್ಪ್ರೀತ್ ಆಲ್ ರೌಂಡರ್ ಆಟ, ಪಂಜಾಬ್ ಕಿಂಗ್ಸ್ ಗೆ ಆರ್ ಸಿಬಿ ವಿರುದ್ಧ 34 ರನ್ ಜಯ

Lingaraj Badiger

ಅಹಮದಾಬಾದ್: ಆಲ್ ರೌಂಡರ್ ಹರ್ಪ್ರೀತ್  ಬ್ರಾರ್(ಅಜೇಯ 25 ಹಾಗೂ 19ಕ್ಕೆ 3) ಹಾಗೂ ನಾಯಕ ಕೆ.ಎಲ್ ರಾಹುಲ್ (ಅಜೇಯ 91) ಅವರ ಭರ್ಜರಿ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ 34 ರನ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿತು. 

ಶುಕ್ರವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 14ನೇ ಆವೃತ್ತಿಯ 26ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 179 ರನ್ ಸೇರಿಸಿತು.

ಗೆಲುವಿಗೆ 180 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಆರ್ ಸಿಬಿ 20 ಓವರ್ ಗೆ 8 ವಿಕೆಟ್ ನಷ್ಟಕ್ಕೆ 145 ರನ್ ಕಲೆ ಹಾಕಿ ಸೋಲು ಕಂಡಿತು.

ಮೊದಲು ಬ್ಯಾಟಿಂಗ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಎಡಗೈ ಬ್ಯಾಟ್ಸ್‌ಮನ್‌ ಹರಪ್ರೀತ್‌ ಬ್ರಾರ್‌ 17 ಎಸೆತಗಳಲ್ಲಿ ಅಜೇಯ 25 ರನ್‌ ಬಾರಿಸಿದರೆ, ಬಳಿಕ ಬೌಲಿಂಗ್‌ನಲ್ಲಿ ನಾಲ್ಕು ಓವರ್‌ ಎಸೆದು ಕೇವಲ 19 ರನ್‌ಗಳಿಗೆ 3 ವಿಕೆಟ್‌ ಪಡೆದು ಆರ್‌ಸಿಬಿ ತಂಡದ ಬ್ಯಾಟಿಂಗ್‌ ಬಲವನ್ನು ಅಡಗಿಸಿದರು. ಅವರ ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಆರ್ ಸಿಬಿಯ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ಎಬಿ ಡಿ'ವಿಲಿಯರ್ಸ್‌ (3) ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ (0) ವೈಫಲ್ಯ ಭಾರಿ ಹಿನ್ನಡೆ ತಂದೊಡ್ಡಿತು, ವಿರಾಟ್‌ ಕೊಹ್ಲಿ (35) ಉತ್ತಮ ಆರಂಭ ಕಂಡರೂ ದೊಡ್ಡ ಇನಿಂಗ್ಸ್‌ ಆಡದೇ ಹೋದ ಪರಿಣಾಮ ಒತ್ತಡಕ್ಕೆ ಸಿಲುಕಿ ಸೋಲು ಒಪ್ಪಿಕೊಂಡಿತು.

SCROLL FOR NEXT