ಕ್ರಿಕೆಟ್

ಮಿಷನ್ ಆಕ್ಸಿಜನ್: ಕೋವಿಡ್ ರೋಗಿಗಳ ನೆರವಿಗೆ ಸಚಿನ್ ತೆಂಡೂಲ್ಕರ್ 1 ಕೋಟಿ ರು. ದೇಣಿಗೆ

Shilpa D

ನವದೆಹಲಿ: ನವದೆಹಲಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತೆಂಡೂಲ್ಕರ್ ಕೋವಿಡ್-19 ಸೋಂಕಿತರ ನೆರವಿಗೆ ನಿಂತಿದ್ದಾರೆ. ಕೊರೊನಾ ವೈರಸ್‌ ಎರಡನೇ ಅಲೆ ಎದುರಿಸುತ್ತಿರುವ ದೇಶದಲ್ಲಿ ಕೋವಿಡ್‌-ರೋಗಿಗಳಿಗೆ ನೆರವಾಗುವ ಸಲುವಾಗಿ 'ಮಿಷನ್‌ ಆಕ್ಸಿಜನ್‌ಗೆ' ಒಂದು ಕೋಟಿ ರೂ. ದೇಣಿಗೆಯನ್ನು ಭಾರತ ತಂಡದ ಮಾಜಿ ನಾಯಕ ಸಚಿನ್‌ ತೆಂಡೂಲ್ಕರ್‌ ನೀಡಿದ್ದಾರೆ.

ಅಗತ್ಯವಿರುವ ಈ ಸಮಯದಲ್ಲಿ ರಾಷ್ಟ್ರದಾದ್ಯಂತ ಆಸ್ಪತ್ರೆಗಳಿಗೆ ಜೀವ ಉಳಿಸುವ ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸುವ ಮತ್ತು ಒದಗಿಸುವ ಪ್ರಯತ್ನದಲ್ಲಿ ಮಿಷನ್ ಆಕ್ಸಿಜನ್‌ಗೆ ಅವರು(ಸಚಿನ್‌) ಒಂದು ಕೋಟಿ ರೂ. ದೇಣಿಗೆ ನೀಡಿದ್ದು ನಂಬಲಾಗದಷ್ಟು ಹೃದಯಸ್ಪರ್ಶಿ,ಎಂದು ಮಿಷನ್‌ ಆಕ್ಸಿಜನ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೊರೊನಾ ವೈರಸ್‌ ಎರಡನೇ ಎಲೆಯು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಅಪಾರ ಒತ್ತಡಕ್ಕೆ ತಳ್ಳಿದೆ. ಹೆಚ್ಚಿನ ಸಂಖ್ಯೆಯ ಕೋವಿಡ್ ರೋಗಿಗಳಿಗೆ ಆಮ್ಲಜನಕ ಒದಗಿಸುವುದು ಪ್ರಸ್ತುತ ತುಂಬಾ ಮುಖ್ಯವಾಗಿದೆ. 250 ಯುವ ಉದ್ಯಮಿಗಳ ಗುಂಪು ಮಿಷನ್ ಆಕ್ಸಿಜನ್ ಅಡಿ ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳಲು ಮತ್ತು ದೇಶಾದ್ಯಂತದ ಆಸ್ಪತ್ರೆಗಳಿಗೆ ದಾನ ಮಾಡಲು ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದೆ” ಎಂದು ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿದ್ದಾರೆ.

SCROLL FOR NEXT