ಸಂಗ್ರಹ ಚಿತ್ರ 
ಕ್ರಿಕೆಟ್

ಭಾರತ ವರ್ಸಸ್ ಇಂಗ್ಲೆಂಡ್ ಮೊದಲ ಟೆಸ್ಟ್ ವೇಳೆ ನಿಧಾನಗತಿ ಬೌಲಿಂಗ್: ಉಭಯ ತಂಡಗಳಿಗೆ ಐಸಿಸಿ ದಂಡ

ಮೊದಲ ಟೆಸ್ಟ್ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಮಾಡಿದ ಆರೋಪದ ಮೇರೆಗೆ ಐಸಿಸಿ ಭಾರತ ಮತ್ತು ಇಂಗ್ಲೆಂಡ್ ತಂಡಗಳಿಗೆ ದಂಡ ವಿಧಿಸಿದೆ.

ದುಬೈ: ಮೊದಲ ಟೆಸ್ಟ್ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಮಾಡಿದ ಆರೋಪದ ಮೇರೆಗೆ ಐಸಿಸಿ ಭಾರತ ಮತ್ತು ಇಂಗ್ಲೆಂಡ್ ತಂಡಗಳಿಗೆ ದಂಡ ವಿಧಿಸಿದೆ.

ಈ ಹಿಂದೆ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಹಿನ್ನಲೆಯಲ್ಲಿ ಇಂಗ್ಲೆಂಡ್ ಮತ್ತು ಭಾರತ ತಂಡಗಳಿಗೆ ತಮ್ಮ ಪಂದ್ಯದ ಶುಲ್ಕದ ಶೇಕಡಾ 40 ರಷ್ಟು ದಂಡವನ್ನು ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳಲ್ಲಿ ತಲಾ ಎರಡು ಅಂಕಗಳನ್ನು ದಂಡವಾಗಿ ಕಡಿತಗೊಳಿಸಿದೆ. 

ನಿಗಧಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಎರಡು ಓವರ್ ಕಡಿಮೆ ಎಸೆದದ್ದಕ್ಕಾಗಿ ಐಸಿಸಿಯ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ಮುಖ್ಯಸ್ಥ ಕ್ರಿಸ್ ಬ್ರಾಡ್ ಅವರು ದಂಡ ವಿಧಿಸಿದ್ದಾರೆ. 

 ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿಯ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿ, ಆಟಗಾರರು ತಮ್ಮ ಪಂದ್ಯದ ಶೇ.20 ರಷ್ಟು ವೇತನವನ್ನು ದಂಡ ಶುಲ್ಕವಾಗಿ  ತೆರಬೇಕಿದೆ. ಇದರ ಜೊತೆಯಲ್ಲಿ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಟದ ಪರಿಸ್ಥಿತಿಗಳ ಅನುಚ್ಛೇದ 16.11.2 ರ ಪ್ರಕಾರ, ಒಂದು ತಂಡಕ್ಕೆ ಪ್ರತಿ ಓವರ್‌ಗೆ ಒಂದು ಅಂಕವನ್ನು ದಂಡವಾಗಿ ಕಡಿತ ಮಾಡಲಾಗಿದೆ.

ಇದಕ್ಕೂ ಮೊದಲು ನಡೆದ ವಿಚಾರಣೆಯಲ್ಲಿ ಇಂಗ್ಲೆಂಡ್ ಕ್ಯಾಪ್ಟನ್ ಜೋ ರೂಟ್ ಮತ್ತು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಪ್ಪೊಪ್ಪಿಕೊಂಡರು  ಅಲ್ಲದೆ ಐಸಿಸಿಯ ಉದ್ದೇಶಿತ ನಿರ್ಬಂಧಗಳನ್ನು ಸ್ವೀಕರಿಸಿದ್ದಾರೆ.  ಆದ್ದರಿಂದ ಔಪಚಾರಿಕ ವಿಚಾರಣೆಗಳ ಅಗತ್ಯವಿಲ್ಲ.

ಮೈದಾನದ ಅಂಪೈರ್‌ಗಳಾದ ಮೈಕೆಲ್ ಗೌಗ್ ಮತ್ತು ರಿಚರ್ಡ್ ಕೆಟಲ್‌ಬರೋ, ಮೂರನೇ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ನಾಲ್ಕನೇ ಅಂಪೈರ್ ಡೇವಿಡ್ ಮಿಲ್ಸ್ ಅವರ ಆರೋಪಗಳು ಸಾಬೀತಾಗಿದೆ ಎಂದು ಐಸಿಸಿ ಶಿಸ್ತು ಸಮಿತಿ ಹೇಳಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಂದು ಮಳೆ ಹಾಳಾದ ನಂತರ ಈ ಪಂದ್ಯ ಡ್ರಾದಲ್ಲಿ ಕೊನೆಯಾಗಿತ್ತು. ಆದರೆ ಈ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು ಹೆಚ್ಚಿನ ಅವಕಾಶವಿತ್ತು. ಅಂತಿಮ ದಿನ ಗೆಲ್ಲಲು 157 ರನ್ ಗಳ ಅವಶ್ಯಕತೆಯಿತ್ತು, ಒಂಬತ್ತು ವಿಕೆಟ್ ಕೈಯಲ್ಲಿತ್ತು, ಆದರೆ ಕೆಟ್ಟ ಹವಾಮಾನ ಮತ್ತು ಮಳೆಯಿಂದಾಗಿ ಇಡೀ ದಿನ ಒಂದೂ ಎಸೆತ ಕಾಣದೇ ದಿನದಾಟ ರದ್ದಾಯಿತು.  
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT