ಅತಿಯಾ - ಸುನೀಲ್ ಶೆಟ್ಟಿ - ರಾಹುಲ್ 
ಕ್ರಿಕೆಟ್

ಥ್ಯಾಂಕ್ಸ್‌ ಫಾರ್‌ ಮೈ ಬರ್ತ್‌ ಡೇ  ಗಿಫ್ಟ್: ಪುತ್ರಿಯ ಗೆಳೆಯ ಕೆಎಲ್ ರಾಹುಲ್ ಶತಕಕ್ಕೆ ಸುನೀಲ್ ಶೆಟ್ಟಿ ಹರ್ಷೋದ್ಗಾರ!

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅಜೇಯ ಶತಕ(248 ಎಸೆತಗಳಲ್ಲಿ 127; 12 ಬೌಂಡರಿ, ಸಿಕ್ಸರ್) ಬಾರಿಸಿದ್ದಾರೆ.

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅಜೇಯ ಶತಕ(248 ಎಸೆತಗಳಲ್ಲಿ 127; 12 ಬೌಂಡರಿ, ಸಿಕ್ಸರ್) ಬಾರಿಸಿದ್ದಾರೆ.

ಕ್ರಿಕೆಟ್ ನ ಮೆಕ್ಕಾ ಎಂದು ಹೆಸರಾಗಿರುವ ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ತಮ್ಮ ಮೊದಲ ಶತಕವನ್ನು ದಾಖಲಿಸಿದ್ದಾರೆ. ಈ ಸಾಧನೆ ಮಾಡಿದ ಮೂರನೇ ಭಾರತೀಯ ಓಪನರ್ ಎಂಬ ಹೆಗ್ಗಳಿಕೆ  ಹೊಂದಿದ್ದಾರೆ.

ಈ ಸಂದರ್ಭದಲ್ಲಿ, ರಾಹುಲ್ ಅವವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಗೆಳತಿ ಅತಿಯಾ ಶೆಟ್ಟಿ ಜೊತೆಗೆ ಆಕೆಯ ತಂದೆ, ಜನಪ್ರಿಯ ಬಾಲಿವುಡ್ ನಟ ಸುನೀಲ್ ಶೆಟ್ಟಿ ಸಹ ರಾಹುಲ್ ಗೆ  ಶುಭ ಹಾರೈಸಿದ್ದಾರೆ.

ರಾಹುಲ್ ಶತಕ ಭಾರಿಸಿದ ಕ್ಲಿಪ್ ಜೋಡಿಸಿ .. ಸುನಿಲ್ ಶೆಟ್ಟಿ   ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಪೋಸ್ಟ್ ಗೆ ನೆಟಿಜನ್ ಗಳು ಫಿದಾ ಆಗಿದ್ದಾರೆ. 100@ ಕ್ರಿಕೆಟ್ ಮೆಕ್ಕಾ.. ಕಂಗ್ರಾಟ್ಸ್ ಅಂಡ್ ಗಾಡ್ ಬ್ಲೆಸ್ ಯೂ ಬಾಬಾ..  ನನ್ನ ಹುಟ್ಟುಹಬ್ಬಕ್ಕೆ (ಆಗಸ್ಟ್ 11) ನೀವು ನೀಡಿದ ಉಡುಗೊರೆ ತುಂಬಾ ಅದ್ಭುತವಾಗಿದೆ ಎಂದು ಸುನೀಲ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ. ಇದು ನೆಟಿಜನ್ ಗಳನ್ನು ವಿಪರೀತ  ಆಕರ್ಷಿಸಿದೆ. 

ಸುನಿಲ್ ಶೆಟ್ಟಿ ಅವರು ರಾಹುಲ್ ಅವರಿಗೆ ಶುಭಾಶಯ ತಿಳಿಸಿರುವ ವಿಧಾನ, ರಾಹುಲ್ ಅವರನ್ನು ಬಾಬಾ ಎಂದು ಸಂಬೋಧಿಸಿ ಹಾರೈಸಿರುವುದರ ಬಗ್ಗೆ ನೆಟಿಜನ್ ಗಳು ಭಿನ್ನವಾಗಿ ಸ್ಪಂದಿಸಿದ್ದಾರೆ.

ಮತ್ತೊಂದೆಡೆ ಅತಿಯಾ ಶೆಟ್ಟಿ ಕೂಡ ರಾಹುಲ್ ಸೆಂಚುರಿ ಕುರಿತು ಪೋಸ್ಟ್ ಮಾಡಿದ್ದು, ಕೆ ಎಲ್ ರಾಹುಲ್ ಅವರನ್ನು ಟ್ಯಾಗ್ ಮಾಡಿ ತನ್ನ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಂಪು ಹೃದಯದ ಐಕಾನ್ ಅನ್ನು ಪೋಸ್ಟ್ ಮಾಡಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗಾಗಿ ರಾಹುಲ್ ಜೊತೆಗೆ ಅತಿಯಾ, ಇಂಗ್ಲೆಂಡ್ ಗೆ ತೆರಳಿದ್ದು, ರಾಹುಲ್, ಅತಿಯಾ ತನ್ನ ಸಂಗಾತಿ ಎಂದು ಬಿಸಿಸಿಐಗೆ ಹೇಳಿರುವುದು ವಿಶೇಷ . ಈ ಇಬ್ಬರೂ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ. ಮಕ್ಕಳು ಸಂತೋಷದಿಂದ ಇದ್ದರೆ ಸಾಕು ಎಂದು ಸುನಿಲ್ ಶೆಟ್ಟಿ, ಅವರ ಪತ್ನಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. 

ಏತನ್ಮಧ್ಯೆ, ಕೆಎಲ್ ರಾಹುಲ್ ಅಜೇಯ ಶತಕ, ರೋಹಿತ್ ಶರ್ಮಾ (83), ಕೊಹ್ಲಿ (42) ಗಳಿಸಿ ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಮೂರು ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿತು. ಒನ್  ಡೌನ್ ಬ್ಯಾಟ್ಸ್ ಮನ್ ಪೂಜಾರ(9) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಪ್ರಸ್ತುತ ರಾಹುಲ್ ಅವರೊಂದಿಗೆ ರಹಾನೆ (1) ಕ್ರೀಸ್ ನಲ್ಲಿದ್ದಾರೆ. ಇಂಗ್ಲೆಂಡ್ ಬೌಲರ್ ಗಳಲ್ಲಿ ಆಂಡರ್ಸನ್ 2, ರಾಬಿನ್ಸನ್ ಒಂದು ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!