ಕ್ರಿಕೆಟ್

2ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 151 ರನ್ ಗಳ ಭರ್ಜರಿ ಜಯ

Srinivasamurthy VN

ಲಂಡನ್: ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 151 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಭಾರತ ನೀಡಿದ್ದ 272 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಕೇವಲ 120 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಬೌಲರ್ ಗಳಾದ ಮೊಹಮದ್ ಶಮಿ, ಜಸ್ ಪ್ರೀತ್ ಬುಮ್ರಾ ಮತ್ತು ಮಹಮದ್ ಸಿರಾಜ್ ಅವರ ಕರಾರುವಕ್ಕಾದ ದಾಳಿಯ ಮುಂದೆ ಮಂಕಾದ ಇಂಗ್ಲೆಂಡ್ ಆಟಗಾರರು  ಪೆವಿಲಿಯನ್ ಪರೇಡ್ ನಡೆಸಿದರು. ನಾಯಕ ಜೋ ರೂಟ್ (33 ರನ್), ಜಾಸ್ ಬಟ್ಲರ್ (25 ರನ್), ಮೊಯಿನ್ (15 ರನ್) ಬಿಟ್ಟರ್ ಉಳಿದಾವ ಆಟಗಾರರೂ ಕೂಡ ಎರಡಂಕಿ ಮೊತ್ತ ಕೂಡ ದಾಟಲಿಲ್ಲ. ಪ್ರಮುಖವಾಗಿ ಇಂಗ್ಲೆಂಡ್ ಆರಂಭಿಕರು ಸೇರಿದಂತೆ ಐದು ಮಂದಿ ಶೂನ್ಯಕ್ಕೆ ಔಟ್ ಆಗಿದ್ದು ಇಂಗ್ಲೆಂಡ್ ಸೋಲಿಗೆ  ಕಾರಣವಾಯಿತು.

ಇನ್ನು ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಮಹಮದ್ ಸಿರಾಜ್ 4 ವಿಕೆಟ್ ಪಡೆದರೆ ಬುಮ್ರಾ 3, ಇಶಾಂತ್ ಶರ್ಮಾ 2 ಮತ್ತು ಶಮಿ 1 ವಿಕೆಟ್ ಪಡೆದರು.
 
ಆಸರೆಯಾದ ಬಾಲಂಗೋಚಿಗಳು
ಇದಕ್ಕೂ ಮೊದಲು ನಾಲ್ಕನೇ ದಿನದಾಟದಲ್ಲಿ ಆತಂಕದ ಸುಳಿಯಲ್ಲಿದ್ದ ಭಾರತ ತಂಡವು ಐದನೇ ದಿನ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಚುರುಕಿನ ಆಟದಿಂದ ಪುಟಿದೆದ್ದು ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್‌ಗೆ 272 ರನ್ ಗೆಲುವಿನ ಗುರಿ ನೀಡಿತ್ತು. ಒಂಬತ್ತನೇ ವಿಕೆಟ್​ಗೆ, ಶಮಿ ಮತ್ತು ಬುಮ್ರಾ ಜೋಡಿ 89 ರನ್​ಗಳ ದಾಖಲೆಯ ಜೊತೆಯಾಟವಾಡಿತು. ಈ ಪೈಕಿ ಶಮಿ (53) ಅಜೇಯ ಅರ್ಧಶತಕ ಗಳಿಸಿದರೆ, ಬುಮ್ರಾ ಅಜೇಯ 34 ರನ್ ಗಳಿಸಿದರು.

SCROLL FOR NEXT