ಕ್ರಿಕೆಟ್

ಕೊಹ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿಲ್ಲ, ಅವರ ವಿಧಾನ ಸರಿ ಇಲ್ಲ, ಬದಲಾಗಬೇಕು: ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್

Srinivas Rao BV

ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಮಾಜಿ ಕ್ರಿಕೆಟಿಗ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ವಿಮರ್ಶೆ ಮಾಡಿದ್ದಾರೆ. 

"ಈಗ ಕೊಹ್ಲಿ ಚೆನ್ನಾಗಿ ಆಡುತ್ತಿಲ್ಲ, ಅಷ್ಟೇ ಅಲ್ಲ ಅವರ ಆಟದಲ್ಲಿ ದೊಡ್ಡ ತಾಂತ್ರಿಕ ದೋಷ ಈಗ ಎದುರಾಗಿದೆ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. 

ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಕೊಹ್ಲಿ ನಿರಾಶೆಗೊಳಿಸಿದ್ದಾರೆ. ಕೊಹ್ಲಿ ಸ್ಯಾಮ್ ಕರ್ರನ್ ಓವರ್ ನಲ್ಲಿ ಔಟ್‌ ಸೈಡ್‌ ಆಫ್‌ಸ್ಟಂಪ್‌ ಮೇಲಿನ ಎಸೆತವನ್ನು ಆಡಲು ಹೋಗಿ ವಿಕೆಟ್ ಕೀಪರ್ ಗೆ ಕ್ಯಾಚ್ ಇತ್ತು ಪೆವಿಲಿಯನ್ ನತ್ತ ನಡೆದರು. 

ಈ ಬಗ್ಗೆ ವಿಮರ್ಶೆ ಮಾಡಿರುವ ಸುನಿಲ್ ಗವಾಸ್ಕರ್, ಈ ವಿಧಾನ ಕೊಹ್ಲಿಗೆ ಯಶಸ್ವಿಯಾಗಿದೆ. ಈ ಕಾರಣದಿಂದಲೇ ಅವರು 8000 ಟೆಸ್ಟ್ ರನ್‌ ಗಳಿಸಿದ್ದಾರೆ. ಆದರೆ ಈಗ ಅವರು ಔಟ್ ಸೈಟ್ ಆಫ್ ಸ್ಟಂಪ್ ಮೇಲಿನ ಎಸೆತಗಳನ್ನು ಅನಗತ್ಯವಾಗಿ ಆಡಲು ಹೋಗುತ್ತಿದ್ದಾರೆ. ಚೆಂಡು ಬರುವುದಕ್ಕೂ ಮೊದಲೇ ಆಡುತ್ತಿದ್ದಾರೆ. ಪಾದ ಒಂದು ಕಡೆ ಇದ್ದರೆ ಬ್ಯಾಟ್ ಇನ್ನೆಲ್ಲೋ ಇದೆ, ಈ ಕಾರಣದಿಂದ ಕೊಹ್ಲಿ ನಿಜವಾಗಿಯೂ ಚೆನ್ನಾಗಿ ಆಡಿಲ್ಲ ಎಂದು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಜೊತೆ ಮಾತನಾಡಿರುವ ಅವರು ಹೇಳಿದ್ದಾರೆ. 

ಒಡಿಐ, ಟಿ20 ಗಳಲ್ಲಿ ಪರಿಸ್ಥಿತಿ ವಿಭಿನ್ನವಾಗಿರಲಿದೆ. ಆದರೆ ಇದು ಟೆಸ್ಟ್ ಪಂದ್ಯ, ಐದು ದಿನಗಳ ಪಂದ್ಯದಲ್ಲಿ ಪ್ರತಿಯೊಬ್ಬ ಬ್ಯಾಟ್ಸ್ ಮನ್ ಕೂಡ ರನ್ ಗಳಿಸುತ್ತಾರೆ, ಆದರೆ ವಿಧಾನಗಳು ಬೇರೆ ಇರುತ್ತವೆ ಎಂದು ಗವಾಸ್ಕರ್ ಹೇಳಿದ್ದಾರೆ. 

ಎದುರಾಳಿ ತಂಡವನ್ನು ಎದುರಿಸಲು ಈ ವಿಧಾನವನ್ನು ಅನುಸರಿಸುವುದೆ ಉದ್ದೇಶವಾಗಿದ್ದರೆ, ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಇದು ಟೆಸ್ಟ್ ಆದ್ದರಿಂದ ಪ್ರತಿಯೊಬ್ಬ ಬ್ಯಾಟ್ಸ್ ಮನ್ ಕೂಡಾ ತನ್ನದೇ ಸ್ವಂತ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. 

SCROLL FOR NEXT