ಕ್ರಿಕೆಟ್

ಭಾರತಕ್ಕೆ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಘಾತ, 432 ರನ್ ಗಳಿಗೆ ಇಂಗ್ಲೆಂಡ್ ಆಲೌಟ್

Srinivas Rao BV

ಲೀಡ್ಸ್: ಶುಕ್ರವಾರ ಇಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ನ ಮೂರನೇ ದಿನದ ಭೋಜನ ವಿರಾಮಕ್ಕೆ ಮುನ್ನ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ ಒಂದು ವಿಕೆಟ್ ಗೆ 112 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾ, ಇಂಗ್ಲೆಂಡ್ ಗಿಂತ 320 ರನ್ ಹಿಂದುಳಿದಿದ್ದಾರೆ.

ಇಂದು ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 19 ಓವರ್‌ಗಳವರೆಗೆ ಆಡಿತು. 19 ನೇ ಓವರ್ ನ ಕೊನೆಯ ಎಸೆತದಲ್ಲಿ ಲೋಕೇಶ್ ರಾಹುಲ್ ವಿಕೆಟ್ ಬೀಳುವ ಮುನ್ನ ಭಾರತ ಉತ್ತಮ ಸ್ಥಿತಿಯಲ್ಲಿತ್ತು. ಕ್ರೇಗ್ ಓವರ್‌ಟನ್‌ನ ಎಸೆತದಲ್ಲಿ ರಾಹುಲ್ ಹೊರ ಹುಗುತ್ತಿದ್ದ ಚೆಂಡನ್ನು ಕೆಣಕಿ, ಸ್ಲಿಪ್ ನಲ್ಲಿದ್ದ ಜಾನಿ ಬೇರ್ ಸ್ಟೋ ಹಿಡಿದ ಅದ್ಭುತ್ ಕ್ಯಾಚ್ ಗೆ ಬಲಿಯಾದರು. ಆರಂಭಿಕ ರೋಹಿತ್ ಶರ್ಮಾ ಅಜೇಯ 25 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ಇಂದು ಮೊದಲ ಇನ್ನಿಂಗ್ಸ್ ನಲ್ಲಿ 432 ರನ್ ಗಳಿಗೆ ಆಲೌಟ್ ಆಗಿತ್ತು. ಇಂಗ್ಲೆಂಡ್ ಇಂದು 8 ವಿಕೆಟ್ ಗೆ 423 ರನ್ ಗಳಿಂದ ಆಟ ಮುಂದುವರಿಸಿತು. ಕ್ರೇಗ್ ಓವರ್‌ಟನ್ ಮತ್ತು ಓಲಿ ರಾಬಿನ್ಸನ್ ಮುನ್ನಡೆ ವಿಸ್ತರಿಸಲು ಮೈದಾನ ಪ್ರವೇಶಿಸಿದರು. ಆದರೆ ಬೆಳಗಿನ ಅವಧಿಯಲ್ಲಿ ಅವರು ಕೇವಲ 3.2 ಓವರ್‌ಗಳಿಗೆ ಬ್ಯಾಟ್ ಮಾಡಲು ಸಾಧ್ಯವಾಯಿತು. ಇದರ ಫಲಿತಾಂಶವಾಗಿ ಕೇವಲ ಒಂಬತ್ತು ರನ್ ಗಳನ್ನು ಮಾತ್ರ ಮುನ್ನಡೆಗೆ ವೃದ್ಧಿಸಿತು.

ಭಾರತದ ಪರ ವೇಗಿ ಮೊಹಮ್ಮದ್ ಶಮಿ 4, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿದರು.

SCROLL FOR NEXT