ವಿರಾಟ್ ಕೊಹ್ಲಿ 
ಕ್ರಿಕೆಟ್

ಈಗಿನ ಆಯ್ಕೆಗಾರರು ಶ್ರೇಷ್ಠರಾಗಿರಬಹುದು, ಆದರೆ ಕೊಹ್ಲಿ ಆಡಿದ ಅರ್ಧದಷ್ಟು ಪಂದ್ಯಗಳನ್ನೂ ಅವರು ಆಡಿಲ್ಲ: ಕೀರ್ತಿ ಆಜಾದ್

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಏಕದಿನ ನಾಯಕತ್ವದಿಂದ ವಿರಾಟ್‌ ಕೊಹ್ಲಿ ಬದಲಾಯಿಸಿದ ಕ್ರಮ ಅತ್ಯಂತ ವಿವಾದಾತ್ಮಕವಾಗಿದೆ. ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ಪಟ್ಟ ಕಟ್ಟಿರುವ ಬಗ್ಗೆ ಈಗಲೂ ಚರ್ಚೆ ಮುಂದುವರೆದಿದೆ.

ಮುಂಬೈ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಏಕದಿನ ನಾಯಕತ್ವದಿಂದ ವಿರಾಟ್‌ ಕೊಹ್ಲಿ ಬದಲಾಯಿಸಿದ ಕ್ರಮ ಅತ್ಯಂತ ವಿವಾದಾತ್ಮಕವಾಗಿದೆ. ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ಪಟ್ಟ ಕಟ್ಟಿರುವ ಬಗ್ಗೆ ಈಗಲೂ ಚರ್ಚೆ ಮುಂದುವರೆದಿದೆ.

ಇನ್ನೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಒಂದು ದಿನ ಮೊದಲು ಕೊಹ್ಲಿ ಮಾಧ್ಯಮಗಳ ಮುಂದೆ ಬಿಸಿಸಿಐ ಬಗೆಗಿನ ತಮ್ಮ ಅಸಹನೆ ಹೊರಹಾಕಿದ್ದರು. ಗಂಗೂಲಿ ನೀಡಿರುವ ಹೇಳಿಕೆ ಖಂಡಿಸುವುದಾಗಿ ಹೇಳಿದ್ದರು. ಇದರಿಂದಾಗಿ ನಾಯಕತ್ವ ವಿವಾದ, ಕೊಹ್ಲಿ ವರ್ಸಸ್‌ ಬಿಸಿಸಿಐಯಾಗಿ ಪರಿವರ್ತನೆಗೊಂಡಿದೆ . ಈ ಹಿನ್ನಲೆಯಲ್ಲಿ ಟೀಂ ಇಂಡಿಯಾ ಮಾಜಿ ಆಲ್ ರೌಂಡರ್ ಕೀರ್ತಿ ಆಜಾದ್ ಕೊಹ್ಲಿ ಅವರನ್ನು ಬೆಂಬಲಿಸಿ ಬಿಸಿಸಿಐ ಆಯ್ಕೆದಾರರ ಕ್ರಮವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊಹ್ಲಿ ವಿಷಯದಲ್ಲಿ ಆಯ್ಕೆಗಾರರು ವ್ಯವಹರಿಸಿದ ವಿಧಾನ ತಪ್ಪಾಗಿದೆ. ಏಕದಿನ ನಾಯಕತ್ವದಿಂದ ಅವರನ್ನು ಕೈಬಿಡಲಾಗಿದೆ ಎಂದು ಹೇಳುವುದು ಸರಿ ಇರಬಹುದು. ಆದರೆ ಅವರು ಅದನ್ನು ಕೈಗೊಂಡಿರುವ ರೀತಿ ಸರಿಯಾಗಿಲ್ಲ. ನಾಯಕನಾಗಿ ವಿರಾಟ್ ಕೊಹ್ಲಿ ತಂಡಕ್ಕೆ ಉತ್ತಮ ಯಶಸ್ಸು ನೀಡಿದ್ದಾರೆ. ಈಗಾಗಲೇ ಹಲವು ಪಂದ್ಯಗಳನ್ನು ಆಡಿ ಉತ್ತಮ ಅನುಭವ ಪಡೆದಿರುವ ಹಿರಿಯ ಕ್ರಿಕೆಟಿಗ.

ಇಂತಹ ಅನುಭವಿ ಆಟಗಾರನನ್ನು ಬಿಸಿಸಿಐ ಆಯ್ಕೆ ಸಮಿತಿ ಗೌರವದಿಂದ ನಡೆಸಿಕೊಂಡಿದ್ದರೆ ಚೆನ್ನಾಗಿತ್ತು. ನಾಯಕತ್ವ ಬದಲಾಯಿಸುವ ಬಗ್ಗೆ ಕೊಹ್ಲಿಗೆ ಮೊದಲೇ ಹೇಳಿದ್ದರೆ ಸೂಕ್ತವಾಗಿ ಕಾಣುತ್ತಿತ್ತು. ಈಗಿನ ಆಯ್ಕೆಗಾರರು ಶ್ರೇಷ್ಠರಾಗಿರಬಹುದು, ಆದರೆ ಕೊಹ್ಲಿ ಅವರು ಆಡಿದ ಅರ್ಧ ಪಂದ್ಯಗಳನ್ನೂ ಆಡಿಲ್ಲ. ಕೊಹ್ಲಿ ಅವರನ್ನು ಅವಮಾನಿಸುವ ಹಕ್ಕು ಅವರಿಗಿಲ್ಲ. ನಾನು ರಾಷ್ಟ್ರೀಯ ಆಯ್ಕೆಗಾರನಾಗಿದ್ದಾಗ ಪ್ರಧಾನ ತಂಡವನ್ನು ಆಯ್ಕೆಗೊಳಿಸಿ ಅಧ್ಯಕ್ಷರ ಜೊತೆ ಚರ್ಚಿಸಿ ಅವರು ಒಪ್ಪಿಗೆ ನೀಡಿದ ನಂತರ ನಂತರ ತಂಡವನ್ನು ಘೋಷಿಸಲಾಗುತ್ತಿತ್ತು. ಇದು ನಿಯಮ. ಆದರೆ ಈಗ ಅದನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನೂ ದಕ್ಷಿಣ ಆಫ್ರಿಕಾ ನೆಲಕ್ಕೆ ಬಂದಿಳಿದ ಟೀಂ ಇಂಡಿಯಾ ಅಲ್ಲಿ ಮೂರು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ನಡೆಯಲಿದೆ. ಗಾಯದ ಸಮಸ್ಯೆಯಿಂದ ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ದೂರ ಉಳಿದಿರುವುದು ಗೊತ್ತೇ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT