ಕ್ರಿಕೆಟ್

ಇಂಗ್ಲೆಂಡ್ ಸರಣಿಗೆ ಪೂಜಾರ ಬದಲಿಗೆ ಪೃಥ್ವಿ ಶಾಗೆ ಸ್ಥಾನ ನೀಡಬೇಕು: ಬ್ರಾಡ್ ಹಾಗ್

Srinivasamurthy VN

ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ದದ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಆಸಿಸ್ ಮಾಜಿ ಸ್ಪಿನ್ನರ್ ಸಲಹೆ ನೀಡಿದ್ದು, ಮೂರನೇ ಕ್ರಮಾಂಕದಲ್ಲಿ ಪೂಜಾರ ಬದಲಿಗೆ ಪೃಥ್ವಿ ಶಾರನ್ನು ಆಡಿಸುವಂತೆ ಹೇಳಿದ್ದಾರೆ.

ಹೌದು.. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೂರನೇ ಸ್ಥಾನಕ್ಕೆ ಯುವ ಆಟಗಾರ ಪೃಥ್ವಿ ಶಾ ಹೆಚ್ಚು ಸೂಕ್ತರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅನುಭವಿ ಭಾರತದ ಬ್ಯಾಟ್ಸ್‌ಮನ್‌ ರನ್ನು ಬದಲಿಸುವ ಬಗ್ಗೆ ಭಾರತ ಯೋಚಿಸಿದರೆ ಚೇತೇಶ್ವರ ಪೂಜಾರ ಸ್ಥಾನಕ್ಕೆ  ಪೃಥ್ವಿ ಶಾ ಪ್ರಬಲ ಅಭ್ಯರ್ಥಿಯಾಗಲಿದ್ದಾರೆ ಎಂದು   ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಪೂಜಾರ ಪರವಾಗಿ ಬರಬೇಕೆ ಎಂಬ ಅಭಿಮಾನಿಯೊಬ್ಬರ ಪ್ರಶ್ನೆಗೆ, ಉತ್ತರಿಸಿದ 50 ವರ್ಷದ ಎಡಗೈ ಸ್ಪಿನ್ನರ್ ಪೃಥ್ವಿ ಶಾ ಉತ್ತಮ ಆಯ್ಕೆ ಎಂದು ಹೇಳಿದರು.

"ಪೂಜಾರರ ಬದಲಿಗೆ ಪರ್ಯಾಯ ಆಟಗಾರರನ್ನು ಆಯ್ಕೆ ಮಾಡಬೇಕು ಎದಾದರೆ ಅದು ಪೃಥ್ವಿ ಶಾ ಆಗಿರುತ್ತದೆ. ಆತ ಸಾಕಷ್ಟು ಪ್ರತಿಭೆ ಮತ್ತು ದೀರ್ಘ ಭವಿಷ್ಯವನ್ನು ಹೊಂದಿದ್ದಾನೆ. ಶಾ ಪ್ರವಾಸಕ್ಕೆ ಆಯ್ಕೆಯಾದ ತಂಡದಲ್ಲಿಲ್ಲ. ಆದರೆ ವೈಲ್ಡ್ ಕಾರ್ಡ್ ಆಯ್ಕೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಭಾರತ ಇಂಗ್ಲೆಂಡ್ ನಲ್ಲಿ ಐದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಭಾರತವನ್ನು ಪ್ರತಿನಿಧಿಸಿರುವ ಶಾ, ಜುಲೈ 13 ರಿಂದ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಆಯ್ಕೆಯಾಗಿದ್ದು, ಕೊಲಂಬೊದಲ್ಲಿರುವ ರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ. 

SCROLL FOR NEXT