ಕ್ರಿಕೆಟ್

1 ಸಾವಿರ ವಿಕೆಟ್; ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್

Srinivasamurthy VN

ಮ್ಯಾಂಚೆಸ್ಟರ್: ಇಂಗ್ಲೆಂಡ್‌ ಕ್ರಿಕೆಟ್ ತಂಡದ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನದಲ್ಲಿ 1 ಸಾವಿರ ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇಂಗ್ಲಿಷ್ ಕೌಂಟಿ ಕ್ರಿಕೆಟ್ ನಲ್ಲಿ ಸೋಮವಾರ 19 ರನ್‌ಗಳಿಗೆ 7 ವಿಕೆಟ್ ಪಡೆಯುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1000 ವಿಕೆಟ್ ಪಡೆದ ಗೌರವಕ್ಕೆ ಪಾತ್ರರಾದರು. ಎಮಿರೇಟ್ಸ್ ಓಲ್ಡ್ ಟ್ರಾಫೊರ್ಡ್‌ನಲ್ಲಿ ಲ್ಯಾಂಕ್‌ಶೈರ್ ತಂಡದ ಪರ ಆಡಿದ ಆ್ಯಂಡರ್ಸನ್ ಅವರ ಮಾರಕ ದಾಳಿಯಿಂದಾಗಿ ಕೆಂಟ್ 74  ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ ಆ್ಯಂಡರ್ಸನ್ ಜೀವನ ಶ್ರೇಷ್ಠ (7/19) ಸಾಧನೆಯೊಂದಿಗೆ ಕೆಂಟ್ ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ ಸಾವಿರ ವಿಕೆಟ್ ಪಡೆದ ದಾಖಲೆ ಬರೆದರು. ಅಂತೆಯೇ ತಮ್ಮ ವಿಕೆಟ್ ಗಳಿಕೆಯನ್ನು 1002ಕ್ಕೆ ಏರಿಕೆ ಮಾಡಿಕೊಂಡರು.

ನಾಯಕತ್ವದಲ್ಲೂ ದಾಖಲೆ ಬರೆದಿದ್ದ ಆ್ಯಂಡರ್ಸನ್
ಕಳೆದ ತಿಂಗಳು ಆ್ಯಂಡರ್ಸನ್, ಅತಿಹೆಚ್ಚು ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡಿನ ನಾಯಕತ್ವ ವಹಿಸಿದ ದಾಖಲೆಗೆ ಪಾತ್ರರಾಗಿದ್ದರು. ಎಡ್ಜ್‌ ಬಾಸ್ಟನ್‌ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಅವರು ಆಲಿಸ್ಟರ್ ಕುಕ್ ಅವರ ದಾಖಲೆಯನ್ನು ಮುರಿದಿದ್ದರು. ಆ್ಯಂಡರ್ಸನ್ 162 ಟೆಸ್ಟ್ ಪಂದ್ಯಗಳಲ್ಲಿ ತಂಡದ  ನಾಯಕತ್ವ ವಹಿಸಿದ್ದಾರೆ. 165 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದ ಕುಕ್ ಎರಡನೇ ಸ್ಥಾನದಲ್ಲಿದ್ದರೆ 147 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಮೂರನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ ನಲ್ಲಿ ಇಂಗ್ಲೆಂಡ್ ಪರ 600ಕ್ಕಿಂತ ಅಧಿಕ ವಿಕೆಟ್ ಗಳಿಸಿದ ಏಕೈಕ ಬೌಲರ್ ಎಂಬ ಹೆಗ್ಗಳಿಕೆಯೂ ಅವರದ್ದಾಗಿದ್ದು, ಟೆಸ್ಟ್ ಪಂದ್ಯಗಳಲ್ಲಿ ಇದುವರೆಗೆ ಆ್ಯಂಡರ್ಸನ್ 617 ವಿಕೆಟ್ ಕಬಳಿಸಿದ್ದಾರೆ.

SCROLL FOR NEXT