ಕ್ರಿಕೆಟ್

ಇಂಗ್ಲೆಂಡ್‌ನಲ್ಲಿ ​ರಿಷಭ್ ಪಂತ್ ಗೆ​ ಕೋವಿಡ್-19 ಸೋಂಕು: ಎಚ್ಚರಿಕೆ ವಹಿಸುವಂತೆ ಬಿಬಿಸಿಐ ಕಾರ್ಯದರ್ಶಿ ಜಯ್ ಶಾ ಸೂಚನೆ!

Manjula VN

ಲಂಡನ್: ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತೀಯ ತಂಡ ಇಬ್ಬರು ಆಟಗಾರರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದ್ದು, ಈ ಪೈಕಿ ಒಬ್ಬ ಆಟಗಾರನ ಹೆಸರು ಬಹಿರಂಗಗೊಂಡಿದೆ. 

ತಂಡದ ಪ್ರಮುಖ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್​ ಅವರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. 

ರಿಷಭ್ ಪಂತ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಕಳೆದ 8 ದಿನಗಳಿಂದ ಅವರು ಐಸೋಲೇಷನ್ ನಲ್ಲಿದ್ದಾರೆಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ. 

"ಹೌದು, ಒಬ್ಬ ಆಟಗಾರನಿಗೆ ಸದ್ಯ ರೋಗಲಕ್ಷಣವಿಲ್ಲದಿದ್ದರೂ ಕೋವಿಡ್ ಪರೀಕ್ಷೆಯಲ್ಲಿ ಪಾಸಿವಿಟ್ ಆಗಿದೆ.  ಆಟಗಾರನು ಪರಿಚಯಸ್ಥ ಸ್ಥಳದಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ ಹಾಗೂ ಗುರುವಾರ ತಂಡದೊಂದಿಗೆ ಡರ್ಹಾಮ್‌ಗೆ ಪ್ರಯಾಣಿಸುವುದಿಲ್ಲ" ಎಂದು ಬಿಸಿಸಿಐ ಮೂಲವು ತಿಳಿಸಿದೆ.

ಈ ಹಿಂದೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ಇಂಗ್ಲೆಂಡ್ ನಲ್ಲಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಇ-ಮೇಲ್ ಕಳುಹಿಸಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ತಿಳಿಸಿದ್ದರು. ಕೋವಿಶೀಲ್ಡ್ ಕೇವಲ ರಕ್ಷಣೆಯನ್ನು ಒದಗಿಸುತ್ತದೆ. ಆದರೆ ವೈರಸ್ ವಿರುದ್ಧ ಸಂಪೂರ್ಣ ವಿನಾಯಿತಿ ನೀಡದ ಕಾರಣ ಜನಸಂದಣಿ ಸ್ಥಳಕ್ಕೆ ತೆರಳದಂತೆ ಜಯ್ ಶಾ ತಮ್ಮ ಇ-ಮೇಲ್ ನಲ್ಲಿ  ತಿಳಿಸಿದ್ದರು. 

ವಾಸ್ತವವಾಗಿ ಆಟಗಾರರು ವಿಂಬಲ್ಡನ್ ಮತ್ತು ಯುರೋ ಚಾಂಪಿಯನ್‌ಶಿಪ್‌ಗೆ ಹೋಗುವುದನ್ನು ತಪ್ಪಿಸಬೇಕು ಎಂದು ಶಾ ಅವರ ಪತ್ರದಲ್ಲಿ ನಿರ್ದಿಷ್ಟವಾಗಿ ಹೇಳಲಾಗಿತ್ತು. ಈ ಎರಡು ಟೂರ್ನಿಗಳು ಇತ್ತೀಚೆಗೆ ಅಲ್ಲಿ ಮುಕ್ತಾಯವಾಯಿತು. ಶಾ ಅವರ ಇ-ಮೇಲ್ ಬೆನ್ನಲ್ಲೇ ಈ ಸುದ್ದಿ ಹೊರಬಂದಿದೆ. 

ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗಿಂತ ಮೊದಲು ಭಾರತ ಕ್ರಿಕೆಟ್ ತಂಡ ಡರ್ಹಾಮ್ ನಲ್ಲಿ ಒಟ್ಟಿಗೆ ಸೇರಲಿದೆ.

SCROLL FOR NEXT