ಕ್ರಿಕೆಟ್

ಹದಿಹರೆಯದಲ್ಲಿ ಟ್ವಿಟರ್ ನಲ್ಲಿ ಜನಾಂಗೀಯ ನಿಂದನೆ ಪೋಸ್ಟ್ ಆರೋಪ: ಮತ್ತೋರ್ವ ಇಂಗ್ಲೆಂಡ್ ಆಟಗಾರನ ವಿಚಾರಣೆ!

Nagaraja AB

ಲಂಡನ್:  ಆಲ್ಲಿ ರಾಬಿನ್ ಸನ್  ನಂತರ ಹದಿಹರೆಯದ ವಯಸ್ಸಿನಲ್ಲಿ ಟ್ವಿಟರ್ ನಲ್ಲಿ ಜನಾಂಗೀಯ ನಿಂದನೆ ಆರೋಪದ ಮೇರೆಗೆ ಇಂಗ್ಲೆಂಡ್ ನ ಮತ್ತೋರ್ವ ಆಟಗಾರನನ್ನು ಆ ದೇಶದ ಕ್ರಿಕೆಟ್ ಮಂಡಳಿ ವಿಚಾರಣೆ ನಡೆಸುತ್ತಿದೆ.ಇದೇ ರೀತಿಯ ವರ್ತನೆಗಾಗಿ ಆಲ್ಲಿ ರಾಬಿನ್ ಸನ್ ಅವರು ಅಮಾನತುಗೊಂಡಿದ್ದರು.

ಆಟಗಾರನ ಹಳೆಯ ಟ್ವೀಟ್‌ಗಳನ್ನು ವಿಸ್ಡೆನ್.ಕಾಮ್ ಪತ್ತೆಹಚ್ಚಿದೆ. ಆ ಸಮಯದಲ್ಲಿ ಅವರು 16 ನೇ ವಯಸ್ಸನ್ನು ತಲುಪದ ಕಾರಣ ಕ್ರಿಕೆಟಿಗನ ಗುರುತನ್ನು ಅದು ಬಹಿರಂಗಪಡಿಸಲಿಲ್ಲ. ಆಟಗಾರನ ಗುರುತನ್ನು ಬಹಿರಂಗಪಡಿಸದೆ ಟ್ವಿಟ್ ಸ್ಕ್ರೀನ್ ಶಾಟ್ ನ್ನು ವೆಬ್ ಸೈಟ್ ಫೋಸ್ಟ್ ಮಾಡಿದೆ.

"ನೀವು ಏಷ್ಯನ್ನರೊಂದಿಗೆ ಹೊರಟಿದ್ದೀರಿ ಎಂದು #asianthroughhandthrough # hweollo #chinky ಹ್ಯಾಶ್‌ಟ್ಯಾಗ್‌ಗಳೊಂದಿಗೆ ಆಟಗಾರ ಪೋಸ್ಟ್ ಮಾಡಿದಂತೆ ತೋರುತ್ತದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಇದೀಗ ಈ ಬಗ್ಗೆ ತನಿಖೆ ನಡೆಸುತ್ತಿದೆ.

ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಸೂಕ್ತ ಸಮಯದಲ್ಲಿ ಹೆಚ್ಚಿನ ಪ್ರತಿಕ್ರಿಯೆಯನ್ನು ನೀಡುತ್ತೇವೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ವಕ್ತಾರರು ಹೇಳಿರುವುದಾಗಿ ವೆಬ್ ಸೈಟ್ ತಿಳಿಸಿದೆ. 2012 ಮತ್ತು 2013ರಲ್ಲಿ ಮಾಡಿದ್ದ ಜನಾಂಗೀಯ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ರಾಬಿನ್ ಸನ್ ಅವರನ್ನು ಅಮಾನತುಗೊಳಿಸದ ಬೆನ್ನಲ್ಲೇ, ಈ ಅವಹೇಳನಕಾರಿ ಫೋಸ್ಟ್ ಗಳು ಮುನ್ನೆಲೆಗೆ ಬಂದಿವೆ.

SCROLL FOR NEXT