ಕ್ರಿಕೆಟ್

ಭಾರತದ ಬದಲು ಯುಎಇಯಲ್ಲಿ ನಡೆಯಲಿದೆ ಟಿ20 ವಿಶ್ವಕಪ್: ಇಲ್ಲಿದೆ ವೇಳಾಪಟ್ಟಿ ವಿವರ!

Raghavendra Adiga

ದುಬೈ: 2021ರ ಟಿ20 ವಿಶ್ವಕಪ್ ಯುಎಇಯಲ್ಲಿ ಅಕ್ಟೋಬರ್ 17 ರಿಂದ ಪ್ರಾರಂಭವಾಗಲಿದ್ದು 16 ತಂಡಗಳ ಪಂದ್ಯಾವಳಿಯ ಫೈನಲ್ ನವೆಂಬರ್ 14 ರಂದು ನಡೆಯಲಿದೆ.

ಶೋಪೀಸ್ ಇವೆಂಟ್ ಗಾಗಿ ನಿಗದಿಪಡಿಸಿದ ತಾತ್ಕಾಲಿಕ ದಿನಾಂಕಗಳು ಇವು, ಸಾಂಕ್ರಾಮಿಕದಿಂದಾಗಿ  ವಿಶ್ವಕಪ್ ಅನ್ನು ಭಾರತದಿಂದ ಸ್ಥಳಾಂತರಿಸಬೇಕಾಯಿತು. ಸ್ಥಳ ಬದಲಾವಣೆ ಮತ್ತು ದಿನಾಂಕಗಳ ಬಗ್ಗೆ ಬಿಸಿಸಿಐ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ನೀಡುವ ನಿರೀಕ್ಷೆಯಿದೆ.

ಟಿ20 ವಿಶ್ವಕಪ್ ಅನ್ನು ಯುಎಇಗೆ ಸ್ಥಳಾಂತರಿಸುವ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತವಾಗಿ ಐಸಿಸಿಗೆ ಪತ್ರ ಬರೆಯಬೇಕಾಗಿಲ್ಲವಾದರೂ, 'ಮಧ್ಯಪ್ರಾಚ್ಯದಲ್ಲಿ ನಡೆಯಲಿರುವ ಪಂದ್ಯಾವಳಿಯ ಯೋಜನೆಗೆ ಸಂಬಂಧಿಸಿದಂತೆ ಅದು ಇದಾಗಲೇ ಚಿಂತಿಸಿದೆ ' ಎಂದು  ESPNCricinfo ವರದಿಯೊಂದು ತಿಳಿಸಿದೆ. .

30 ಪಂದ್ಯಗಳನ್ನು ಒಳಗೊಂಡ ಸೂಪರ್ 12 ಹಂತವು ಅಕ್ಟೋಬರ್ 24 ರಿಂದ ಪ್ರಾರಂಭವಾಗಲಿದೆ. ಸೂಪರ್ 12ದಲ್ಲಿ  ತಂಡಗಳನ್ನು ತಲಾ ಆರು ಗುಂಪುಗಳಾಗಿ ವಿಭಜಿಸಲಿದ್ದು, ಯುಎಇಯ ದುಬೈ, ಅಬುಧಾಬಿ ಮತ್ತು ಶಾರ್ಜಾದ ಮೂರು ಸ್ಥಳಗಳಲ್ಲಿ ಆಡಲಾಗುವುದು.

ಭಾರತವು ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಬಹುದೇ ಎಂಬ ಬಗ್ಗೆ ಅಂತಿಮ ನಿರ್ಧಾರ ಮಾಡಲು ಜೂನ್ 1 ರಂದು ಐಸಿಸಿ ಬಿಸಿಸಿಐಗೆ ಜೂನ್ ಅಂತ್ಯದವರೆಗೆ ಸಮಯಾವಕಾಶ ನೀಡಿತು. ಟಿ 20 ವಿಶ್ವಕಪ್‌ಗಾಗಿ ಬಿಸಿಸಿಐ ಒಂಬತ್ತು ಸ್ಥಳಗಳನ್ನು ಅಂತಿಮಗೊಳಿಸಿತ್ತು ಆದರೆ ತಪಾಸಣೆ ನಡೆಸಲು ಉದ್ದೇಶಿಸಿರುವ ಐಸಿಸಿ ತಂಡವು ಏಪ್ರಿಲ್‌ನಲ್ಲಿ ತನ್ನ ಭೇಟಿಯನ್ನು ರದ್ದುಗೊಳಿಸಬೇಕಾಯಿತು.
 

SCROLL FOR NEXT