ಕ್ರಿಕೆಟ್

ಭಾರತ-ಲಂಕಾ ನಡುವೆ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿ ನಡೆಯಲಿದೆ: ಬಿಸಿಸಿಐ ಅಧ್ಯಕ್ಷ ಗಂಗೂಲಿ

Vishwanath S

ನವದೆಹಲಿ: ರದ್ದುಗೊಂಡಿರುವ ಐಪಿಎಲ್ ಟೂರ್ನಿ ಭಾರತದಲ್ಲಿ ನಡೆಯುವುದಿಲ್ಲ ಎಂದು ಹೇಳಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇದೀಗ ಭಾರತ ಮತ್ತು ಲಂಕಾ ನಡುವಿನ ಕ್ರಿಕೆಟ್ ಸರಣಿ ಜುಲೈನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. 

ಜುಲೈನಲ್ಲಿ ಟೀಂ ಇಂಡಿಯಾ ಲಂಕಾದಲ್ಲಿ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿಯನ್ನು ಆಡಲಿದೆ. ಲಂಕಾ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ ಎಂದರು. 

ಏಕಕಾಲಕ್ಕೆ ಭಾರತದ ಎರಡು ತಂಡಗಳು ವಿದೇಶದಲ್ಲಿ ಸರಣಿ ಆಡಲಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ಲಂಕಾ ವಿರುದ್ಧದ ತಂಡದಲ್ಲಿರುವುದಿಲ್ಲ. ಇದಕ್ಕೆ ಕಾರಣ ಅದೇ ಸಮಯದಲ್ಲಿ ಇಂಗ್ಲೆಂಡ್ ನಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಟೂರ್ನಿ ನಡೆಯಲಿದೆ. ಫೈನಲ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣೆಸಲಿದ್ದು ಸೆಪ್ಟೆಂಬರ್ 14ರಂದು ಟೆಸ್ಟ್ ಸರಣಿ ಮುಕ್ತಾಯಗೊಳ್ಳಲಿದೆ. 

ಲಂಕಾ ವಿರುದ್ಧದ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿಗೆ ಪರಿಣತ ಟೀಂ ಇಂಡಿಯಾ ತಂಡವನ್ನು ನಾವು ರಚಿಸುತ್ತೇವೆ. ಅದು ಪ್ರತ್ಯೇಕವಾದ ತಂಡವಾಗಿರುತ್ತದೆ ಎಂದು ಗಂಗೂಲಿ ಹೇಳಿದ್ದಾರೆ. 

SCROLL FOR NEXT