ಕ್ರಿಕೆಟ್

ಮೈದಾನದಲ್ಲಿ ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆಂದು ಹೇಳಿ ಪರೋಕ್ಷವಾಗಿ ಕೊಹ್ಲಿಗೆ ಟಾಂಗ್ ಕೊಟ್ಟ ಕುಲದೀಪ್!

Vishwanath S

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇತ್ತೀಚೆಗಷ್ಟೆ ನ್ಯೂಜಿಲ್ಯಾಂಡ್ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾವನ್ನು ಪ್ರಕಟಿಸಿದ್ದು ಅದರಲ್ಲಿ ತಮ್ಮ ಹೆಸರು ಇಲ್ಲದಿರುವುದಕ್ಕೆ ಬೇಸರಗೊಂಡಿರುವ ಕುಲದೀಪ್ ಯಾದವ್ ಎಂಎಸ್ ಧೋನಿಯನ್ನು ಹೊಗಳುವ ಮೂಲಕ ಪರೋಕ್ಷವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕ್ಕಿದ್ದಾರೆ. 

ನಾನು ಎಂಎಸ್ ಧೋನಿಯನ್ನು ಮೈದಾನದಲ್ಲಿ ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾಯಕನಾಗಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದರು. ಪ್ರತಿ ಬಾರಿ ಬೌಲಿಂಗ್ ಮಾಡಲು ಬಂದಾಗ ವಿಕೆಟ್ ಹಿಂದೆ ನಿಂತು ನನಗೆ ಪ್ರೋತ್ಸಾಹ ಕೊಡುತ್ತಿದ್ದರು. ಆದರೆ ಈಗ ಅಂತಹ ಪ್ರೊತ್ಸಾಹ ಕೊಡುವವರು ಯಾರು ಇಲ್ಲ ಎಂದು ಕುಲದೀಪ್ ಯಾದವ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಧೋನಿ ಅವರು ತಂಡದ ನಾಯಕನಾಗಿರುವಾಗ ಯಜುವೇಂದ್ರ ಚಹಾಲ್ ಮತ್ತು ನಾನು ಪ್ರತಿ ಬಾರಿಯೂ ತಂಡದಲ್ಲಿ ಸ್ಥಾನಪಡೆಯುತ್ತಿದ್ದೇವು. ಇಬ್ಬರು ಧೋನಿಯ ಉಪಯುಕ್ತ ಸಲಹೆಗಳ ಮೂಲಕ ವಿಕೆಟ್ ಗಳನ್ನು ಪಡೆದು ತಂಡಕ್ಕೆ ಜಯ ತಂದುಕೊಟ್ಟಿದ್ದೇವು. ಅಲ್ಲದೆ ಹಲವು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದೇವು ಎಂದು ಕುಲದೀಪ್ ಹೇಳಿದ್ದಾರೆ. 

2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಎಸ್ ಧೋನಿ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಕುಲದೀಪ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಇಂದಿಗೂ ಹರಸಾಹಸ ಪಡುತ್ತಿದ್ದಾರೆ. ಇನ್ನು ಭಾರತ ಪರ 63 ಏಕದಿನ ಪಂದ್ಯಗಳನ್ನು ಆಡಿರುವ ಕುಲದೀಪ್ 105 ವಿಕೆಟ್ ಪಡೆದಿದ್ದು ಟಿ20ಯಲ್ಲಿ 20 ಪಂದ್ಯಗಳ ಪೈಕಿ 39 ವಿಕೆಟ್ ಪಡೆದಿದ್ದಾರೆ. 

SCROLL FOR NEXT