ಕ್ರಿಕೆಟ್

ಕೊರೋನಾ: 2021 ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ರದ್ದು

Raghavendra Adiga

ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳಿಂದಾಗಿ 2021 ಏಷ್ಯಾ ಕಪ್ ಅನ್ನು ರದ್ದುಪಡಿಸಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಣೆ ಹೇಳೀದೆ.

ಕೊನೆಯದಾಗಿ 2018 ರಲ್ಲಿ ನಡೆದ ಏಷ್ಯಾಕಪ್ ಈ ವರ್ಷದ ಜೂನ್ ನಲ್ಲಿ ನಡೆಯಬೇಕಿತ್ತು ಆದರೆ ಶ್ರೀಲಂಕಾ ಕ್ರಿಕೆಟ್ ಸಿಇಒ ಆಶ್ಲೇ ಡಿ ಸಿಲ್ವಾ ಅವರು ಪಂದ್ಯಾವಳಿಯನ್ನು ನಡೆಸುವುದು ಕಷ್ಟಕರವೆಂದು ಘೋಷಿಸಿದರು. "ಸಧ್ಯದ ಪರಿಸ್ಥಿತಿಯಿಂದಾಗಿ, ಈ ವರ್ಷದ ಜೂನ್‌ನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಸಾಧ್ಯವಾಗುವುದಿಲ್ಲ" ಎಂದು ಡಿ ಸಿಲ್ವಾ ಸುದ್ದಿಗಾರರಿಗೆ ತಿಳಿಸಿದರು.

ಈ ಪಂದ್ಯಾವಳಿಯನ್ನು ಪಾಕಿಸ್ತಾನವು ಆಯೋಜಿಸಬೇಕಿತ್ತು ಆದರೆ ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಾಧ್ಯವಾಗದ ಹಿನ್ನೆಲೆ ಅದನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಯಿತು. 

ಮುಂದಿನ ಎರಡು ವರ್ಷಗಳವರೆಗೆ ಎಲ್ಲಾ ತಂಡಗಳು ತಮ್ಮ ಎಫ್‌ಟಿಪಿಗಳಿಗಾಗಿ ಯೋಜಿಸುತ್ತಿರುವುದರಿಂದ,2023 ಐಸಿಸಿ 50 ಓವರ್‌ಗಳ ವಿಶ್ವಕಪ್‌ನ ನಂತರ ಮಾತ್ರ ವೇಳಾಪಟ್ಟಿ ಆಯೋಜನೆಯಾಗಬಹುದು ಎಂದು ಹೇಳಲಾಗಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇನ್ನೂ ಈ ಬಗ್ಗೆ ಔಪಚಾರಿಕ ಘೋಷಣೆ ಮಾಡಿಲ್ಲ.

ಕೋವಿಡ್ -19 ಪ್ರಕರಣಗಳನ್ನು ಗಮನಿಸಿ ಶ್ರೀಲಂಕಾ ಸರ್ಕಾರವು ಅಂತರರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ 10 ದಿನಗಳ ನಿಷೇಧವನ್ನು ವಿಧಿಸಿದೆ.

SCROLL FOR NEXT