ಕ್ರಿಕೆಟ್

ಬ್ಲೈಂಡ್‌ ಡೇಟಿಂಗ್‌ ನಡೆಸಲು ಹೋಗಿ, ಆಕೆಯನ್ನು ನೋಡಿ 5 ನಿಮಿಷಕ್ಕೆ ಓಡಿ ಬಂದಿದ್ದರಂತೆ ಕೊಹ್ಲಿ, ಯಾರ ಜೊತೆ ಗೊತ್ತಾ?

Vishwanath S

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಸಂಬಂಧಿಸಿದ ಹಳೆಯ ವಿಡಿಯೋವೊಂದು ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಎಂಟಿವಿ ವಿಜೆ ಅನುಷಾ ದಾಂಡೇಕರ್ ಖಾಸಗಿ ಕಾರ್ಯಕ್ರಮದಲ್ಲಿ ಹದಿಹರೆಯದ ತರುಣ ಕೊಹ್ಲಿ ಅವರನ್ನು ಸಂದರ್ಶಿಸುತ್ತಿರುವ ವಿಡಿಯೋ ಇದಾಗಿದೆ. 

ಅನುಷಾ, ಯಂಗ್ ಕೊಹ್ಲಿ ಅವರನ್ನು ರಾಪಿಡ್ ಫೈರ್ ಮಾದರಿಯಲ್ಲಿ ಹಲವು  ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲಿ ಒಂದು "ನಿಮ್ಮ ಜೀವನದಲ್ಲಿ ತ್ವರಿತವಾಗಿ ಮುಗಿಸಿನ ಭೋಜನ, ಸ್ನಾನ, ಇತ್ಯಾದಿಗಳ ದಿನಾಂಕ ಕುರಿತು ಪ್ರಶ್ನಿಸಿದ್ದರು. ಅದಕ್ಕೆ ಉತ್ತರವಾಗಿ ಕೊಹ್ಲಿ ಒಬ್ಬ ಹುಡುಗಿ ಜೊತೆ ಬ್ಲೈಂಡ್‌ ಡೇಟ್‌ ನಡೆಸಲು ಹೋಗಿದ್ದೆ, ಆದರೆ ಆಕೆ ಸುಂದರವಾಗರಲಿಲ್ಲ ಹಾಗಾಗಿ ಐದು ನಿಮಿಷದಲ್ಲಿ ಅಲ್ಲಿಂದ ಓಡಿಬಂದಿದ್ದೆ ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ವಿಡಿಯೋದಲ್ಲಿ ಕೊಹ್ಲಿ ಮಾತನಾಡುತ್ತಾ.. ನಾನು ಒಮ್ಮೆ ಬ್ಲೈಂಡ್‌ಡೇಟ್‌ ನಡೆಸಲು ಹೋಗಿದ್ದೆ, ಆದರೆ ಅದು ಕೇವಲ ಐದು ನಿಮಿಷದಲ್ಲಿ ಮುಗಿದುಹೋಯಿತು. ಆ ಹುಡುಗಿ ಸುಂದರವಾಗಿರಲಿಲ್ಲ ಆಕೆಯನ್ನು ನೋಡಿದ ಕೂಡಲೇ ಅಲ್ಲಿಂದ ಓಡಿಹೋಗಿದ್ದೆ, ಸಾರಿ.. ಆ ಹುಡುಗಿ ಸುಂದರವಾಗಿರಲಿಲ್ಲ ಎಂದು ಹೇಳಿದ್ದಾರೆ.

SCROLL FOR NEXT