ಕ್ರಿಕೆಟ್

ಟೀಂ ಇಂಡಿಯಾದ ಅತ್ಯಂತ ಅಪಾಯಕಾರಿ ಆಟಗಾರ ಆತ: ಕಿವೀಸ್ ಬೌಲಿಂಗ್ ಕೋಚ್ ಹೇಳಿದ್ಯಾರನ್ನ?

Vishwanath S

ಲಂಡನ್: ಟೀಂ ಇಂಡಿಯಾದಲ್ಲಿ ಅತ್ಯಂತ ಅಪಾಯಕಾರಿ ಆಟಗಾರ ಆತ. ಆತನನ್ನು ನಿಯಂತ್ರಿಸುವುದು ತಮ್ಮ ತಂಡದ ಬೌಲರ್ಗಳಿಗೆ ದೊಡ್ಡ ತಲೆನೋವಾಗಲಿದೆ ಎಂದು ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಶೇನ್ ಜುರ್ಗೆನ್ಸನ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಭಾಗವಾಗಿ ಭಾರತ -ನ್ಯೂಜಿಲೆಂಡ್ ನಡುವಣ ಹಣಾಹಣಿಯಲ್ಲಿ ತಂಡದ ಬೌಲರ್ಗಳು ರಿಷಬ್ ಪಂತ್ ವಿರುದ್ಧ ಜಾಗರೂಕರಾಗಿರುವಂತೆ ಎಂದು ಅವರು ಎಚ್ಚರಿಸಿದ್ದಾರೆ.  

ಕ್ಷಣಗಳಲ್ಲಿ ಪಂದ್ಯವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದ ಪಂತ್ಗಾಗಿ ವಿಶೇಷ ಯೋಜನೆ ರೂಪಿಸಿದ್ದು, ಅವುಗಳನು ಕಾರ್ಯಗತಗೊಳಿಸಿ ಆತನನ್ನು ಅಡ್ಡಗಟ್ಟುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ದ ಪಂತ್ ಪ್ರತಿದಾಳಿಗೆ ಕಾರಣವಾದ ಅಂಶಗಳನ್ನು ಅಧ್ಯಯನ ಮಾಡಿರುವುದಾಗಿ ಅವರು ವಿವರಿಸಿದ್ದಾರೆ. ಟೀಮ್ ಇಂಡಿಯಾದ ಬೌಲಿಂಗ್ ದಾಳಿಯ ಬಗ್ಗೆ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  

ಜಸ್ ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಇಶಾಂತ್ ತಂಡದ ವೇಗದ ಬಲ ಹೊಂದಿದೆ ಎಂದು ಶ್ಲಾಘಿಸಿದ್ದಾರೆ. ಸೌತಾಂಪ್ಟನ್ ನಲ್ಲಿ ಜೂನ್ 18ರಂದು ಭಾರತ ಹಾಗೂ ನ್ಯೂಜಿಲೆಂಡ್ ಹಣಾಹಣಿ ನಡೆಸಲಿವೆ.

SCROLL FOR NEXT