ಕ್ರಿಕೆಟ್

ಸರ್ಫರಾಜ್ ಸೇರಿ 11 ಪಾಕ್ ಆಟಗಾರರಿಗೆ ಯುಎಇ ವಿಮಾನವೇರಲು ಅನುಮತಿ ನಿರಾಕರಣೆ!

Vishwanath S

ಲಾಹೋರ್: ಕೊರೋನಾ ಮಹಾಮಾರಿಯಿಂದಾಗಿ ಅರ್ಧಕ್ಕೆ ನಿಂತಿದ್ದ ಐಪಿಎಲ್ ಅನ್ನು ಯುಎಇಗೆ ಶಿಫ್ಟ್ ಮಾಡಲಾಗಿದೆ. ಈ ಮಧ್ಯೆ ಪಿಎಸ್ಎಲ್ ಸಹ ಯುಎಇಯಲ್ಲಿ ನಡೆಯಲಿದ್ದು ಪಾಕಿಸ್ತಾನದ 11 ಮಂದಿ ಆಟಗಾರರಿಗೆ ಯುಎಇಗೆ ತೆರಳಲು ಅನುಮತಿ ನಿರಾಕರಿಸಲಾಗಿದೆ. 

ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್) ಆರನೇ ಆವೃತ್ತಿಯೂ ಯುಎಇಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಸೇರಿದಂತೆ 11 ಆಟಗಾರರು ದೋಹಾ ಮೂಲಕ ಅಬುದಾಬಿಗೆ ವಾಣಿಜ್ಯ ವಿಮಾನ ಮೂಲಕ ತೆರಳಬೇಕಿತ್ತು. 

ಈ 11 ಆಟಗಾರರೂ ಕ್ಲಿಯರನ್ಸ್ ಹೊಂದಿರದ ಕಾರಣ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಇಎಸ್ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ. 

ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಯುಎಇಗೆ ಪ್ರಯಾಣಿಸುವವರಿಗೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಇನ್ನು ಕೊರೋನಾದಿಂದ ಅರ್ಧಕ್ಕೆ ನಿಂತು ಹೋಗಿರುವ ಪಿಎಸ್ಎಲ್ ಟೂರ್ನಿಯ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಜೂನ್ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಕರಾಚಿ ಹಾಗೂ ಲಾಹೋರ್ ನಿಂದ 25ರಷ್ಟು ಆಟಗಾರರು ಚಾರ್ಟರ್ಡ್ ವಿಮಾನದ ಮೂಲಕ ಯುಎಇಗೆ ಪ್ರಯಾಣಿಸಬೇಕಿತ್ತು. 

SCROLL FOR NEXT