ಸಾಂದರ್ಭಿಕ ಚಿತ್ರ 
ಕ್ರಿಕೆಟ್

ಟಿ-20 ವಿಶ್ವಕಪ್: ಇಂದು ಆಫ್ಘನ್ v/s ಕಿವೀಸ್ ಪಂದ್ಯ- ಭಾರತದ ಭವಿಷ್ಯ ನಿರ್ಧಾರ

ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪಾಲಿಗೆ ಇವತ್ತು ಅತ್ಯಂತ ಮಹತ್ವ ದಿನ. ವಿರಾಟ್ ಕೊಹ್ಲಿ ಪಡೆ ಅಬುಧಾಬಿ ಗ್ರೌಂಡ್ ನಲ್ಲಿ ಇಂದು ಪಂದ್ಯ ಆಡದಿದ್ದರೂ ಸಹ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ಟೀಮ್ ಗಳು ಭಾರತದ ಸೆಮಿಫೈನಲ್ ಹಾದಿಯನ್ನು ನಿರ್ಧಾರ ಮಾಡಲಿವೆ. ಇಂದು ಮಧ್ಯಾಹ್ನ 3;30ಕ್ಕೆ ಶೇಕ್ ಝಯೇದ್ ಸ್ಟೇಡಿಯಂನಲ್ಲಿ ಸೆಣಸಾಟ ನಡೆಸಲಿವೆ. 

ಅಬುಧಾಬಿ: ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪಾಲಿಗೆ ಇವತ್ತು ಅತ್ಯಂತ ಮಹತ್ವ ದಿನ. ವಿರಾಟ್ ಕೊಹ್ಲಿ ಪಡೆ ಅಬುಧಾಬಿ ಗ್ರೌಂಡ್ ನಲ್ಲಿ ಇಂದು ಪಂದ್ಯ ಆಡದಿದ್ದರೂ ಸಹ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ಟೀಮ್ ಗಳು ಭಾರತದ ಸೆಮಿಫೈನಲ್ ಹಾದಿಯನ್ನು ನಿರ್ಧಾರ ಮಾಡಲಿವೆ. ಇಂದು ಮಧ್ಯಾಹ್ನ 3;30ಕ್ಕೆ ಶೇಕ್ ಝಯೇದ್ ಸ್ಟೇಡಿಯಂನಲ್ಲಿ ಸೆಣಸಾಟ ನಡೆಸಲಿವೆ. 

ಸೆಮಿ ಫೈನಲ್ ಗೆ ಹೋಗುತ್ತಾ ಭಾರತ? ಅಬುಧಾಬಿಯಲ್ಲಿ ನ್ಯೂಜಿಲೆಂಡ್ ಗೆದ್ದರೆ ಪಾಯಿಂಟ್ ಟೇಬಲ್ ನಲ್ಲಿ 8 ಅಂಕಗಳನ್ನು ಗಳಿಸುತ್ತದೆ. ಅಲ್ಲದೆ,  2ನೇ ಸ್ಥಾನ ಖಚಿತಪಡಿಸಿಕೊಂಡು ಸೆಮಿಫೈನಲ್ ಹಂತಕ್ಕೆ ಜಿಗಿಯಲಿದೆ. ಆದ್ರೆ ಅಚ್ಚರಿಯ ಫಲಿತಾಂಶದಲ್ಲಿ ಕಿವೀಸ್ ಸೋಲೊಪ್ಪಿಕೊಂಡರೆ, ಭಾರತ, ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ತಲಾ 6 ಅಂಕಗಳನ್ನು ಪಡೆದುಕೊಳ್ಳುತ್ತವೆ. ಈ ಸಮಯದಲ್ಲಿ ಸೆಮಿಫೈನಲ್ ಗೆ ಏರುವ ತಂಡವನ್ನು ನೆಟ್ ರನ್ ರೇಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಮೂರು ತಂಡಗಳ ಪೈಕಿ ಭಾರತದ ನೆಟ್ ರನ್ ರೇಟ್ ಸದ್ಯದಮಟ್ಟಿಗೆ ಅತ್ಯುತ್ತಮವಾಗಿದೆ.

ಅಫ್ಘನ್ ಗೆಲುವಿಗಾಗಿ ಪ್ರಾರ್ಥನೆ! ಹೀಗಾಗಿಯೇ ಇಡೀ ಭಾರತದ ಕ್ರಿಕೆಟ್ ಅಭಿಮಾನಿಗಳು ಅಪ್ಘಾನಿಸ್ತಾನದ ಗೆಲುವಿಗಾಗಿ ಪ್ರಾರ್ಥನೆ ಮಾಡುತ್ತಿದೆ. ಮೊಹಮ್ಮದ್ ಶಹಜಾದ್, ಮೊಹಮ್ಮದ್ ನಬಿ, ರಶೀದ್ ಖಾನ್, ಎಚ್.ಜಜೈ ಆಟಗಾರರು ಟಿ-20 ಪಾರ್ಮ್ಯಾಟ್ ನಲ್ಲಿ ಅಫ್ಘಾನಿಸ್ತಾನ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬಲಿಷ್ಠ ತಂಡಗಳಿಗೂ ಸೋಲುಣಿಸುವಂತಹ ಬ್ಯಾಟಿಂಗ್, ಸ್ಪಿನ್ ಬೌಲಿಂಗ್ ಪಡೆಯನ್ನು ಅಫ್ಘಾನಿಸ್ತಾನ ಹೊಂದಿದೆ. ಈ ವರೆಗೆ ಸೂಪರ್-12 ರೌಂಡ್ ನಲ್ಲಿ 2 ಪಂದ್ಯಗಳಲ್ಲಿ  ಅಫ್ಘನ್ನರು ಗೆಲುವು ಸಾಧಿಸಿದ್ದಾರೆ. ಅಬುಧಾಬಿ ಗ್ರೌಂಡ್ ನಲ್ಲಿ ಅಂದಾಜು 150 ರಿಂದ 160 ರನ್ ಗಳಿಸಿ, ಅದ್ಭುತ ಬೌಲಿಂಗ್ ಪ್ರದರ್ಶನವನ್ನು ಮಾಡಿದರೆ ಅಫ್ಘಾನಿಸ್ತಾನ ಸುಲಭವಾಗಿ ನ್ಯೂಜಿಲೆಂಡನ್ನು ಸೋಲಿಸಬಹುದಾಗಿದೆ.

ನ್ಯೂಜಿಲೆಂಡ್ ಸ್ಟ್ಯಾಟರ್ಜಿ! ಮತ್ತೊಂದೆಡೆ, ಸೆಮಿಫೈನಲ್ ತಲುಪಲು ನ್ಯೂಜಿಲೆಂಡ್ ತಂಡಕ್ಕೆ ಕೇವಲ 1 ಗೆಲುವು ಮಾತ್ರ ಸಾಕು. ಕಿವೀಸ್ ಪಡೆ ಇದುವರೆಗೆ ಭಾರತ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳನ್ನು ಸೋಲಿಸಿದೆ. ಇಂಥ ಸಂದರ್ಭದಲ್ಲಿ ಯಾವುದೇ ನೆಟ್-ರನ್  ರೇಟ್ ನ ಸಂಕಷ್ಟದಲ್ಲಿ ಸಿಲುಕಿಕೊಳ್ಳದೆ ಕೇನ್ ವಿಲಿಯಮ್ಸನ್ ನೇತೃತ್ವದ ತಂಡ ಸುಲಭವಾಗಿ ಸೆಮಿಫೈನಲ್ ಗೆ ಜಿಗಿಯಬಹುದಾಗಿದೆ. ಮಾರ್ಟಿನ್ ಗಪ್ಟಿಲ್, ಕೇನ್ ವಿಲಿಯಮ್ಸನ್ ಸೇರಿದಂತೆ ನ್ಯೂಜಿಲೆಂಡ್ ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅಬುಧಾಬಿ ಗ್ರೌಂಡ್ ನಲ್ಲಿ ಏನಾದ್ರೂ ಪವಾಡ ನಡೆದ್ರೆ ಮಾತ್ರ ಅಫ್ಘಾನಿಗಳು ನ್ಯೂಜಿಲೆಂಡ್ ತಂಡವನ್ನು ಸೋಲಿಸಬಹುದು.

ಟಿ-20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಈ ಹಿಂದೆ ನಡೆದ 50 ಓವರ್ ಗಳ ವರ್ಲ್ಡ್ ಕಪ್ ಪಂದ್ಯಗಳಲ್ಲಿ ಅಫ್ಘಾನಿಸ್ತಾನ, ನ್ಯೂಜಿಲೆಂಡ್ ಗೆ 2 ಬಾರಿ ಸೋತಿದೆ. 

ಅಫ್ಘಾನಿಸ್ತಾನದ ಸಂಭಾವ್ಯ ಆಟಗಾರರು: ಎಚ್.ಜಜೈ, ಮೊಹಮ್ಮದ್ ಶಹಜಾದ್, ಆರ್. ಗುರ್ಬಾಜ್, ಎನ್. ಜದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಜಿ. ನಾಯಬ್, ಎಸ್. ಷರೀಫ್, ರಶೀದ್ ಖಾನ್, ಎನ್. ಉಲ್ ಹಕ್ ಹಾಗೂ ಹಮೀದ್ ಹಸನ್ (ಮುಜೀಬ್ ಫಿಟ್ ಆಗಿದ್ದರೆ ಪ್ಲೇಯಿಂಗ್-11ಕ್ಕೆ ಸೇರ್ಪಡೆಯಾಗಬಹುದು) ನ್ಯೂಜಿಲೆಂಡ್ ನ ಸಂಭಾವ್ಯ ಆಟಗಾರರು: ಮಾರ್ಟಿನ್ ಗಪ್ಟಿಲ್, ಡಿ.ಮಿಚೆಲ್, ಕೇನ್ ವಿಲಿಯಮ್ಸನ್, ಡಿ.ಕಾನ್ವೇ, ಗ್ಲೆನ್ ಫಿಲಿಪ್ಸ್, ಜಿ. ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟೀಮ್ ಸೌಥಿ, ಇಶ್ ಸೋಧಿ ಹಾಗೂ ಟ್ರೆಂಟ್ ಬೌಲ್ಟ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT