ಭಾರತ-ನಮೀಬಿಯಾ ಪಂದ್ಯ 
ಕ್ರಿಕೆಟ್

ಟಿ20 ವಿಶ್ವಕಪ್: ಕೊಹ್ಲಿ ನಾಯಕತ್ವದ ಕೊನೆಯ ಟಿ20 ಪಂದ್ಯದಲ್ಲಿ ಭಾರತಕ್ಕೆ ನಮೀಬಿಯಾ ವಿರುದ್ಧ 9 ವಿಕೆಟ್ ಜಯ

ಕೋಹ್ಲಿ ನಾಯಕತ್ವದ ಕೊನೆಯ ಟಿ20 ಪಂದ್ಯದಲ್ಲಿ (ಟಿ20 ವಿಶ್ವಕಪ್) ಭಾರತ ತಂಡ ನಮೀಬಿಯಾ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. 

ದುಬೈ: ಕೋಹ್ಲಿ ನಾಯಕತ್ವದ ಕೊನೆಯ ಟಿ20 ಪಂದ್ಯದಲ್ಲಿ (ಟಿ20 ವಿಶ್ವಕಪ್) ಭಾರತ ತಂಡ ನಮೀಬಿಯಾ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. 

ಟಾಸ್ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಮೀಬಿಯಾ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳನ್ನು ಗಳಿಸಿತು. ಆರಂಭಿಕ ಆಟಗಾರರಾದ ಸ್ಟೀಫನ್ ಬಾರ್ಡ್ ಹಾಗೂ ಮೈಕಲ್ ವಾನ್ ಲಿಂಜೆನ್ ಉತ್ತಮ ಆರಂಭ ನೀಡಲು ಯತ್ನಿಸಿದರು ಆದರೆ ಒಂದೇ ರನ್ ನ ಅಂತರದಲ್ಲಿ ಭಾರತ 2 ವಿಕೆಟ್ ಕಬಳಿಸಿ ಉತ್ತಮ ಆರಂಭಕ್ಕೆ ಬ್ರೇಕ್ ಹಾಕಿತು. 

ಬುಮ್ರಾ ಬೌಲಿಂಗ್ ದಾಳಿಗೆ ಲಿಂಜೆನ್ ವಿಕೆಟ್ ಒಪ್ಪಿಸಿದರೆ, ಕ್ರೆಗ್ ವಿಲಿಯಮ್ಸ್ ಖಾತೆ ತೆರೆಯುವ ಮೊದಲೇ ಜಡೇಜಾ ದಾಳಿಗೆ ಪೆವಿಲಿಯನ್ ನತ್ತ ನಡೆದರು. 

ಇನ್ನು ನಮೀಬಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಆರ್ ಅಶ್ವಿನ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. 

ರನ್ ಚೇಸಿಂಗ್ ನಲ್ಲಿ ಭಾರತದ ಪರ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಮೊದಲ ವಿಕೆಟ್ ಗೆ 86 ರನ್ ಗಳ ಅತ್ಯುತ್ತಮ ಜೊತೆಯಾಟ ನೀಡಿದರು, ರೋಹಿತ್ ಶರ್ಮಾ (56) ರಾಹುಲ್ (ಔಟಾಗದೇ 54 ರನ್ )ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಕೊಹ್ಲಿ ನಾಯಕತ್ವ ಹಾಗೂ ರವಿಶಾಸ್ತ್ರಿಯ ಮಾರ್ಗದರ್ಶನದ ಕೊನೆಯ ಪಂದ್ಯ ಇದಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಕೊಡಿ...ಆಶೀರ್ವಾದ.. ಸಿದ್ದರಾಮಯ್ಯ ಕಾಲಿಗೆ ಬಿದ್ದ ಡಿ ಕೆ ಶಿವಕುಮಾರ್.. ಪರಸ್ಪರ ಆಲಿಂಗನ, ಒಟ್ಟಿಗೆ ಬ್ರೇಕ್ ಫಾಸ್ಟ್-Photos

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT