ಕ್ರಿಕೆಟ್

2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆಯೋಜನೆ; ಮೂರು ಐಸಿಸಿ ಟೂರ್ನಿಗಳಿಗೆ ಭಾರತ ಆತಿಥ್ಯ

Nagaraja AB

ದುಬೈ: ಎರಡು ದಶಕಗಳ ನಂತರ ಪಾಕಿಸ್ತಾನಕ್ಕೆ ದೊಡ್ಡ ಕ್ರಿಕೆಟ್ ಟೂರ್ನಿ ಆಯೋಜಿಸುವ ಅವಕಾಶ ಸಿಕ್ಕಿದೆ. 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಪಾಕ್ ಆಯೋಜಿಸಲಿದೆ. 

ಬಿಸಿಸಿಐ 2023 ರಿಂದ 2031ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮೂರು ವಿಶ್ವಮಟ್ಟದ ಟೂರ್ನಿಗಳಿಗೆ ಆತಿಥ್ಯ ವಹಿಸಲಿದೆ.  2026ರ ಟಿ-20 ವಿಶ್ವಕಪ್, 2029ರ ಚಾಂಪಿಯನ್ಸ್ ಟ್ರೋಫಿ ಮತ್ತು 2031ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳಿಗೆ ಭಾರತ ಆತಿಥ್ಯ ವಹಿಸುವುದು.

 ಪಾಕ್ ಕ್ರಿಕೆಟ್ ಮಂಡಳಿ ಬಹುತೇಕ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಟೂರ್ನಿ ಆಯೋಜಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಐಸಿಸಿ ಮಂಗಳವಾರ ಬಿಡುಗಡೆ ಮಾಡಿರುವ ವೇಳಾಪಟ್ಟಿ ಪ್ರಕಾರ, 2024ರಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಟಿ-20 ವಿಶ್ವಕಪ್ ಆಯೋಜಿಸಲಿವೆ. ಉತ್ತರ ಅಮೆರಿಕ ಆತಿಥ್ಯ ವಹಿಸಲಿರುವ ಪ್ರಥಮ ವಿಶ್ವ ಮಟ್ಟದ ಟೂರ್ನಿ ಇದಾಗಿದೆ. 

11 ಪೂರ್ಣವಧಿ ಸದಸ್ಯ ರಾಷ್ಟ್ರಗಳು ಮತ್ತು ಮೂರು ಸಹ ಸದಸ್ಯ ರಾಷ್ಟ್ರಗಳನ್ನು ಎರಡು ಏಕದಿನ ವಿಶ್ವಕಪ್, ನಾಲ್ಕು ಟಿ-20 ವಿಶ್ವಕಪ್ ಮತ್ತು ಎರಡು  ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳನ್ನು ಆಯೋಜಿಸಲು ಆಯ್ಕೆ ಮಾಡಲಾಗಿದೆ ಎಂದು ಐಸಿಸಿ ಹೇಳಿದೆ.

SCROLL FOR NEXT