ಕ್ರಿಕೆಟ್

ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕ ಮೇಲೆ ಸೂರ್ಯಕುಮಾರ್, ಇಶಾನ್ ಪ್ರದರ್ಶನ ನಿರಾಶಾದಾಯಕ: ಗವಾಸ್ಕರ್

Vishwanath S

ದುಬೈ: ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರು ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ನಂತರ ಸ್ವಲ್ಪ ಮೈಚಳಿ ಬಿಟ್ಟು ಆಡುತ್ತಿಲ್ಲ ಎಂದು ಭಾರತ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಎಂದಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ 'ಕ್ರಿಕೆಟ್ ಕನೆಕ್ಟೆಡ್' ಕಾರ್ಯಕ್ರಮದಲ್ಲಿ ಐಪಿಎಲ್ 2021 ರ ಎರಡನೇ ಚರಣದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರ ಕಳಪೆ ಫಾರ್ಮ್ ಬಗ್ಗೆ ಚರ್ಚಿಸುತ್ತಿರುವಾಗ ಸುನಿಲ್, "ಸೂರ್ಯಕುಮಾರ್ ಮತ್ತು ಇಶಾನ್ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದ ನಂತರ ಸ್ವಲ್ಪ ನಿರಾಳರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. 

ಖಂಡಿತ ಇದು ಅವರ ಕೈಯಲ್ಲಿ ಇಲ್ಲದಿರಬಹುದು, ಆದರೆ ಅವರು ಆಡುವ ಕೆಲವು ಹೊಡೆತಗಳನ್ನು ನೋಡಿದರೆ, ಅವರು ಭಾರತದ ಆಟಗಾರರು ಎಂಬ ಕಾರಣಕ್ಕೆ ಅವರು ಈ ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸುತ್ತಿದ್ದಾರೆ ಎಂದು ತೋರುತ್ತದೆ. ಕೆಲವೊಮ್ಮೆ ನೀವು ಸ್ವಲ್ಪ ಸಮಯ ನೀಡಬೇಕು ಮತ್ತು ಸರಿಯಾದ ಶಾಟ್ ಅನ್ನು ಆರಿಸಬೇಕಾಗುತ್ತದೆ. ಅವರು ಈ ಬಾರಿ ತಪ್ಪಿಸಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ, ಇಲ್ಲಿ ಅವರ ಶಾಟ್ ಆಯ್ಕೆಯು ಪರಿಪೂರ್ಣವಾಗಿಲ್ಲ ಮತ್ತು ಆದ್ದರಿಂದ ಅವರು ಕಡಿಮೆ ರನ್ಗಳಿಗೆ ಔಟ್ ಆಗುತ್ತಿದ್ದಾರೆ" ಎಂದು ಹೇಳಿದ್ದಾರೆ.

SCROLL FOR NEXT