ಕ್ರಿಕೆಟ್

ಐಪಿಎಲ್ 2022ರಲ್ಲಿ ಪಂಜಾಬ್ ಕಿಂಗ್ಸ್ ಪರ ಕೆಎಲ್ ರಾಹುಲ್ ಆಡುವುದು ಡೌಟ್! ಆರ್ಸಿಬಿ ಮುನ್ನಡೆಸುತ್ತಾರಾ?

Vishwanath S

ನವದೆಹಲಿ: ಐಪಿಎಲ್ 2021ರ ಆವೃತ್ತಿಯಲ್ಲಿ ಇದುವರೆಗೆ ಗರಿಷ್ಠ ರನ್ ಗಳಿಸಿದ ಆಟಗಾರ ಕೆಎಲ್ ರಾಹುಲ್, ಮುಂದಿನ ವರ್ಷ ಪಂಜಾಬ್ ಕಿಂಗ್ಸ್ ನಿಂದ ಹೊರ ನಡೆದು, ಹರಾಜಿನಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ಅವರನ್ನು ಸೇರಿಸಿಕೊಳ್ಳಲು ಆಸಕ್ತಿ ತೋರಿಸಿದ ಕೆಲವು ಫ್ರಾಂಚೈಸಿಗಳು ಅವರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದಿನ ಋತುವಿನಲ್ಲಿ ಉಳಿಸಿಕೊಳ್ಳುವ ನೀತಿಯನ್ನು ಇನ್ನೂ ಘೋಷಿಸಿಲ್ಲ. 

ಮುಂದಿನ ಋತುವಿನಲ್ಲಿ ಮೆಗಾ ಹರಾಜು ನಡೆಯುವುದಿದೆ. ಇಲ್ಲಿಯವರೆಗೆ ಧಾರಣ ನೀತಿ ಮತ್ತು ಫ್ರ್ಯಾಂಚೈಸಿಗಳಿಗೆ ಲಭ್ಯವಿರುವ ರೈಟ್ ಟು ಮ್ಯಾಚ್ (ಆರ್ ಟಿಎಂ) ಕಾರ್ಡ್‌ಗಳ ಸಂಖ್ಯೆಯಲ್ಲಿ ಸ್ಪಷ್ಟತೆ ಇಲ್ಲ.

ಕೆಎಲ್‌ ರಾಹುಲ್‌ ಗಾಯದ ಸಮಸ್ಯೆಯಿಂದಾಗಿ 2017ರ ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು. ನಂತರ 2018ರ ಹರಾಜಿನಲ್ಲಿ ಬರೋಬ್ಬರಿ 11 ಕೋಟಿ ರೂ.ಗಳ ಭಾರಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್‌ ತಂಡ ಸೇರಿದ್ದರು.

ಇನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕತ್ವಕ್ಕೆ ವಿರಾಟ್‌ ಕೊಹ್ಲಿ ಗುಡ್ ಬೈ ಹೇಳುತ್ತಿರುವುದರಿಂದ ಕೆಎಲ್‌ ರಾಹುಲ್‌ ಅವರನ್ನು ಆ ಸ್ಥಾನಕ್ಕೆ ಕರೆತರಲು ಆರ್‌ಸಿಬಿ ಶತಪ್ರಯತ್ನ ನಡೆಸಲಿದೆ. ಸನ್‌ರೈಸರ್ಸ್‌ ಹೈದರಾಬಾದ್ ಕೂಡ ಕಠಿಣ ಪೈಪೋಟಿ ನೀಡಲಿದೆ.

SCROLL FOR NEXT