ಕ್ರಿಕೆಟ್

ಟಿ-20 ವಿಶ್ವಕಪ್; ಪಾಕ್ ನಾಯಕನ ಕ್ರೀಡಾಸ್ಫೂರ್ತಿಗೆ ಮೆಚ್ಚುಗೆ- ವಿಡಿಯೋ  

Nagaraja AB

ಯುಎಇ: ಸೂಪರ್ 12 ಪಂದ್ಯಗಳು ನಡೆಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಮಧ್ಯೆ ಅಭ್ಯಾಸ ಪಂದ್ಯಗಳಲ್ಲಿ ಟಾಪ್ ತಂಡಗಳು ಕಸರತ್ತು ನಡೆಸುತ್ತಿವೆ. ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನದ ಮಧ್ಯೆ ನಿನ್ನೆ ನಡೆದ ವಾರ್ಮ್ ಅಪ್ ಪಂದ್ಯದಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. 

ನಿನ್ನೆ ನಡೆದ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಶಿಮ್ರಾನ್ ಹೆಟ್ಮಿರ್, ಇನ್ನಿಂಗ್ಸ್ ನ 15ನೇ ಓವರ್ ನಲ್ಲಿ ಹಸನ್ ಅಲಿಯ ಬೌಲನ್ ಫುಲ್ ಮಾಡಲು ಹೋಗಿದ್ದರು. ಈ ವೇಳೆ ಬೌಲ್ ಮಿಸ್ ಆಯಿತು. ಇದು ವಿಕೆಟ್ ಆಗಿದೆ ಅಂತಾ ವೇಗದ ಬೌಲರ್ ಹಸನ್ ಅಲಿ ಹಾಗೂ ಮೊಹಮದ್ ರಿಜ್ವಾನ್ ಅಂಪೈರ್ ಗೆ ಮನವಿ ಮಾಡಿದರು. ಆಗ ಅಂಪೈರ್, ಬ್ಯಾಟ್ಸಮನ್ ಶಿಮ್ರಾನ್ ಹೆಟ್ಮಿರ್ ನನ್ನು ಔಟ್ ಎಂದು ಘೋಷಣೆ ಮಾಡಿದರು. 

ಈ ವೇಳೆ ಶಿಮ್ರಾನ್ , ವಿಕೆಟ್ ಆಗಿಲ್ಲ, ಕೊರಳಿನಲ್ಲಿರುವ ಚೈನ್ ಗೆ ಚೆಂಡು ತಾಗಿದೆ ಎಂದು ಅಂಪೈರ್ ಗೆ  ತಿಳಿಸಲು ಬಂದರು. ಆದರೆ, ಅಂಪೈರ್ ಒಪ್ಪಲಿಲ್ಲ. ಇದರಿಂದ ನಿರಾಸೆಗೊಂಡ ಹೆಟ್ಮೆರ್ ಫೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಮಧ್ಯ ಪ್ರವೇಶಿಸಿದ ಬಾಬರ್ ಅಜಮ್ ಮತ್ತೆ ಪಂದ್ಯವಾಡಲು ಆಮಂತ್ರಿಸಿದರು.

ಬಾಬರ್ ಅವರ ನಿರ್ಧಾರ ಕ್ರಿಕೆಟ್ ಪ್ರೇಮಿಗಳ ಮನ ಗೆದಿತ್ತು. ಆದರೆ, ಏಳು ವಿಕೆಟ್ ನಷ್ಟಕ್ಕೆ 130 ರನ್ ಗಳಿಗೆ ವೆಸ್ಟ್ ಇಂಡೀಸ್ ತಂಡವನ್ನು ಕಟ್ಟಿಹಾಕುವಲ್ಲಿ ಪಾಕ್ ಆಟಗಾರರು ಯಶಸ್ವಿಯಾದರು. ಬಾಬರ್ 41 ಎಸೆತಗಳಲ್ಲಿ 50 ರನ್ ಗಳಿಸುವುದರೊಂದಿಗೆ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸಿತು.

SCROLL FOR NEXT