ಕೀರನ್ ಪೊಲಾರ್ಡ್ ವಿನೂತನ ಪ್ರತಿಭಟನೆ 
ಕ್ರಿಕೆಟ್

ಅಂಪೈರ್ ನಿರ್ಣಯದ ವಿರುದ್ಧ ಪೊಲಾರ್ಡ್ ವಿನೂತನ ಪ್ರತಿಭಟನೆ: ವಿಡಿಯೋ

ಬ್ಯಾಟ್ಸ್ ಮನ್ ಕೀರನ್ ಪೊಲಾರ್ಡ್ ಅಂಪೈರ್ ನಿರ್ಣಯನ್ನು ವಿರೋಧಿಸುತ್ತಾ ಅಂಪೈರ್‌ನಿಂದ ದೂರ ಸರಿದು ನಿಂತು ವಿನೂತನವಾಗಿ ಪ್ರತಿಭಟಿಸಿದರು. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಗ್ರಾಸ್‌ ಐಲೆಟ್‌: ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಸಿಎಲ್ )ನಲ್ಲಿ ವಿಚಿತ್ರ ಘಟನೆ ನಡೆದಿದೆ. ಮಂಗಳವಾರ ಸೆಂಟ್ ಲೂಸಿಯಾ ಕಿಂಗ್ಸ್ (ಎಸ್ಎಲ್ ಕೆ) ಟ್ರಿನ್ ಬಾಗೋ ನೈಟ್ ರೈಡರ್ಸ್ (ಟಿಕೆಆರ್) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎಲ್ ಎಲ್ ಕೆ ಪರ ಬೌಲರ್ ವಹಾಬ್ ರಿಯಾಜ್ ಭಾರಿ ವೈಡ್ ಬಾಲ್ ಎಸೆದರು. ಕ್ರೀಸ್ ನಲ್ಲಿದ್ದ ಟಿಕೆಆರ್ ಬ್ಯಾಟ್ಸ್ ಮನ್ ಟಿಮ್ ಸೀಫರ್ಟ್ ಚೆಂಡನ್ನು ಆಡಲು ಯತ್ನಿಸಿದರೂ ಸಿಗಲಿಲ್ಲ. 

ಆದರೆ, ಫೀಲ್ಡ್ ಅಂಪೈರ್ ಇದನ್ನು ವೈಡ್ ಎಂದು ಪರಿಗಣಿಸಲಿಲ್ಲ. ಇದರಿಂದ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಮತ್ತೊಬ್ಬ ಬ್ಯಾಟ್ಸ್ ಮನ್ ಕೀರನ್ ಪೊಲಾರ್ಡ್ ಅಂಪೈರ್ ನಿರ್ಣಯನ್ನು ವಿರೋಧಿಸುತ್ತಾ ಅಂಪೈರ್‌ನಿಂದ ದೂರ ಸರಿದು ನಿಂತು ವಿನೂತನವಾಗಿ ಪ್ರತಿಭಟಿಸಿದರು. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ, ಪೊಲಾರ್ಡ್ (26 ಎಸೆತಗಳಲ್ಲಿ 41) ಮತ್ತೊಬ್ಬ  ಬ್ಯಾಟ್ಸ್ ಮನ್ ಸೀಫರ್ಟ್ (25 ಎಸೆತಗಳಲ್ಲಿ 37) ಸೇರಿ ಐದನೇ ವಿಕೆಟ್ ಗಳಿಗೆ 78 ರನ್ ಸೇರಿಸಿ ಎಸ್ ಎಲ್ ಕೆ  ಗೆ 158 ರನ್ ಗಳ ಗುರಿ ಇರಿಸಿದರು. ನಂತರ  ಗುರಿ ಬೆನ್ನಟ್ಟಿದ ಎಸ್‌ಎಲ್‌ಕೆ ನಿಗದಿತ 20 ಓವರ್‌ಗಳಲ್ಲಿ 131 ರನ್‌ ಗಳಿಗೆ ಆಲ್‌ ಔಟ್‌ ಆಯಿತು. ಇದರೊಂದಿಗೆ  ಕೆಟಿ ಆರ್‌ ತಂಡ 27 ರನ್ ಗಳ ಜಯ ಸಾಧಿಸಿತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT