ಕ್ರಿಕೆಟ್

ನಾಲ್ಕನೆ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 191 ಕ್ಕೆ ಆಲೌಟ್, ಇಂಗ್ಲೆಂಡ್ ಗೆ ಆರಂಭಿಕ ಆಘಾತ

Nagaraja AB

ಲಂಡನ್: ಒವಲ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 191 ರನ್ ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ತಂಡ ಆರಂಭಿಕ ಮೂರು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 61.3 ಓವರ್ ಗಳಲ್ಲಿ 191 ರನ್ ಗಳಿಗೆ ಆಲೌಟ್ ಆಯಿತು. ನಾಯಕ ವಿರಾಟ್‌ ಕೊಹ್ಲಿ 50 ಮತ್ತು  ಶಾರ್ದುಲ್‌ ಠಾಕೂರ್‌ ಅವರ 57 ರನ್ ಗಳ  ಬಲದಿಂದ 191 ರನ್ ಕಲೆಹಾಕಿತು. ಇವರಿಬ್ಬರನ್ನು ಬಿಟ್ಟರೆ ಉಳಿದ  ಯಾವುದೇ ಆಟಗಾರರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು.

ಇಂಗ್ಲೆಂಡ್‌ ಪರ ಕಮ್‌ಬ್ಯಾಕ್‌ ಪಂದ್ಯವನ್ನಾಡಿದ ಕ್ರಿಸ್‌ ವೋಕ್ಸ್‌ (55ಕ್ಕೆ 4) ನಾಲ್ಕು ವಿಕೆಟ್‌ ಪಡೆದು ಮಿಂಚಿದರೆ,  ಓಲ್ಲೀ ರಾಬಿನ್ಸನ್‌ (38ಕ್ಕೆ 3) ಮೂರು ವಿಕೆಟ್‌ ಪಡೆದರು. ಜೇಮ್ಸ್‌ ಆಂಡರ್ಸನ್ ಮತ್ತು ಕ್ರೇಗ್‌ ಓವರ್ಟರ್ನ್‌ ತಲಾ ಒಂದು ವಿಕೆಟ್ ಕಿತ್ತರು.

ಭಾರತ ನೀಡಿರುವ 191 ರನ್ ಗಳ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್  ತಂಡ 52 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿದೆ. ಆರಂಭಿಕರಾದ ರೋಗಿ ಬರ್ನ್ಸ್ ಮತ್ತು ಹಸೀಬ್ ಹಮೀದ್ ಅವರನ್ನು ವೇಗಿ ಜಸ್ಪ್ರೀತ್ ಬೂಮ್ರಾ ಫೆವಿಲಿಯನ್ ಗೆ ಅಟ್ಟಿದರು.

SCROLL FOR NEXT