ಕ್ರಿಕೆಟ್

ಐಸಿಸಿ ಟಿ20 ವಿಶ್ವಕಪ್: ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದ ಕೇಶವ್ ಮಹಾರಾಜ್; ಇಂಗ್ಲೆಂಡ್ ತಂಡದಲ್ಲಿಲ್ಲ ರೂಟ್ ಗೆ ಸ್ಥಾನ

Vishwanath S

ಜೋಹಾನ್ಸ್ ಬರ್ಗ್/ಲಂಡನ್: ಟಿ20 ಕ್ರಿಕೆಟ್ ಆಡದ ಕೇಶವ್ ಮಹಾರಾಜ್ ಅವರನ್ನು ದಕ್ಷಿಣ ಆಫ್ರಿಕಾದ ಟಿ 20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಅನುಭವಿ ಮತ್ತು ಹಿರಿಯ ಆಟಗಾರರಾದ ಫಾಫ್ ಡು ಪ್ಲೆಸಿಸ್, ಕ್ರಿಸ್ ಮೋರಿಸ್ ಮತ್ತು ಇಮ್ರಾನ್ ತಾಹಿರ್ ಅವರನ್ನು ಕೈಬಿಡಲಾಗಿದೆ.

ಕ್ರಿಕೆಟ್ ದಕ್ಷಿಣ ಆಫ್ರಿಕಾ ಗುರುವಾರ ಟಿ 20 ವಿಶ್ವಕಪ್‌ಗಾಗಿ 15 ಜನರ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಕೇಶವ್ ಮಹಾರಾಜ್ ಸೇರಿದಂತೆ ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಲಾಗಿದೆ. ವಿಶ್ವದ ನಂಬರ್ ಒನ್ ಟಿ 20 ಬೌಲರ್ ತಬ್ರೇಜ್ ಶಮ್ಸಿ ಮತ್ತು ಜಾರ್ನ್ ಫೋರ್ಟುಯಿನ್ ಇತರ ಇಬ್ಬರು ಸ್ಪಿನ್ನರ್‌ಗಳಾಗಿದ್ದಾರೆ. ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ ರೂಪದಲ್ಲಿ ತಂಡದಲ್ಲಿ ಮೂರನೇ ಸ್ಪಿನ್ನರ್ ಕೂಡ ಇದ್ದಾರೆ, ಅವರು ಮೀಸಲು ಆಟಗಾರನಾಗಿ ತಂಡವನ್ನು ಸೇರುತ್ತಾರೆ.

ಆಫ್ರಿಕಾ ತಂಡದ ಆಟಗಾರರ ಪಟ್ಟಿ
ಟೆಂಬಾ ಬಾವುಮಾ(ನಾಯಕ), ಕೇಶವ್ ಮಹಾರಾಜ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಜಾರ್ನ್ ಫೋರ್ಟುಯಿನ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಡಬ್ಲ್ಯೂ ಮುಲ್ಡರ್, ಲುಂಗಿ ನ್ಗಿಡಿ, ಅನ್ರಿಚ್ ನಾರ್ಟ್ಜೆ, ದ್ವಾಯಿನ್ ಪ್ರಿಟೋರಿಯಸ್, ಕಗಿಸೊ ರಬಾಡಿ, ತಬ್ರೈಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡಸೆನ್.

ಇಂಗ್ಲೆಂಡ್ ಟಿ-20 ವಿಶ್ವಕಪ್ ತಂಡದಲ್ಲಿ ರೂಟ್ ಗಿಲ್ಲ ಸ್ಥಾನ
ಲಂಡನ್: ಪ್ರಸ್ತುತ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ನಾಯಕ ಜೋ ರೂಟ್ ಅವರನ್ನು ಇಂಗ್ಲೆಂಡ್ ನ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ವೇಗದ ಬೌಲರ್ ಟೈಮಲ್ ಮಿಲ್ಸ್ ಬಹಳ ಸಮಯದ ನಂತರ ಸೀಮಿತ ಓವರ್ ಗಳ ತಂಡಕ್ಕೆ ಮರಳಿದ್ದಾರೆ. ಟಿ 20 ವಿಶ್ವಕಪ್‌ಗಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪ್ರಕಟಿಸಿದ 15 ಜನರ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ. ಮಿಲ್ಸ್ ಕೊನೆಯದಾಗಿ 2018 ರಲ್ಲಿ ಲಾರ್ಡ್ಸ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿಶ್ವ ಇಲೆವೆನ್ ಗಾಗಿ ಟಿ 20 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಇಂಗ್ಲೆಂಡ್ ಪರವಾಗಿ ಅವರು ಕೊನೆಯದಾಗಿ 2017 ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಭಾರತದ ವಿರುದ್ಧ ಟಿ 20 ಆಡಿದ್ದರು.

ಇಂಗ್ಲೆಂಡ್ ತಂಡದ ಆಟಗಾರರ ಪಟ್ಟಿ
ಇಯಾನ್ ಮಾರ್ಗನ್ (ನಾಯಕ), ಮೊಯೀನ್ ಅಲಿ, ಜೊನಾಥನ್ ಬೈರ್‌ಸ್ಟೊ, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರ್ರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಟೈಮಲ್ ಮಿಲ್ಸ್, ಆದಿಲ್ ರಶೀದ್, ಜೇಸನ್ ರಾಯ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

SCROLL FOR NEXT