ಕ್ರಿಕೆಟ್

ಕಳಪೆ ದಾಖಲೆ ಬರೆದ ಮುಂಬೈ ಇಂಡಿಯನ್ಸ್: 12 ಪಂದ್ಯಗಳಲ್ಲಿ ಚೇಸಿಂಗ್ ನಲ್ಲಿ ಮೊದಲ ಸೋಲು

Srinivasamurthy VN

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಇಂದು ನಡೆದ ಪಂದ್ಯದಲ್ಲಿ 20 ರನ್ ಗಳ ಅಂತರದಲ್ಲಿ ಸೋತ ಮುಂಬೈ ಇಂಡಿಯನ್ಸ್ ತಂಡ ಹೀನಾಯ ದಾಖಲೆ ಬರೆದಿದೆ.

ಹಾಲಿ ಟೂರ್ನಿಯಲ್ಲಿ ಚೇಸಿಂಗ್ ಮಾಡಿದ ಕಳೆದ 12 ಪಂದ್ಯಗಳಲ್ಲಿ ಮೊದಲ ಬಾರಿಗೆ ಸೋಲು ಕಂಡಿದೆ. ಇಂದಿನ ಪಂದ್ಯವೂ ಸೇರಿದಂತೆ ಕಳೆದ 12 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಒಂದರಲ್ಲಿ ಸೋತು, ಒಂದು ಪಂದ್ಯ ಟೈ ಆಗಿದೆ. 

ಮುಂಬೈ ಇಂಡಿಯನ್ಸ್ ತಂಡ ಕೊನೆಯ ಬಾರಿಗೆ ಚೇಸಿಂಗ್ ನಲ್ಲಿ ಸೋತಿದ್ದು, 2019ರ ಏಪ್ರಿಲ್ ನಲ್ಲಿ... ಅಂದು ಕೋಲ್ಕತಾ ನೀಡಿದ್ದ 233 ರನ್ ಗಳ ಬೃಹತ್ ರನ್ ಗಳ ಚೇಸಿಂಗ್ ಪಂದ್ಯದಲ್ಲಿ ಸೋತಿತ್ತು. 

ಇಂದು ನಡೆದ ಪಂದ್ಯದಲ್ಲಿ ಚೆನ್ನೈ ನೀಡಿದ 157 ರನ್ ಗಳ ಸಾಧಾರಣ ಗುರಿಯನ್ನು ಬೆನ್ನುಹತ್ತಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 20 ರನ್ ಗಳ ಅಂತರದಲ್ಲಿ ಚೆನ್ನೈ ಎದುರು ಮಂಡಿಯೂರಿತು. ಮುಂಬೈ ಪರ ಸೌರಭ್ ತಿವಾರಿ ಅರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದಾವ ಆಟಗಾರರಿಂದಲೂ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ.

ಇತ್ತ ಚೆನ್ನೈ ಪರ ಡ್ವೇಯ್ನ್ ಬ್ರಾವೋ 3 ವಿಕೆಟ್ ಕಬಳಿಸಿದರೆ, ದೀಪಕ್ ಚಹರ್ 2 ಮತ್ತು ಜೋಷ್ ಹೇಜಲ್ ವುಡ್ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಕಬಳಿಸಿದರು. ಅಂತೆಯೇ ಚೆನ್ನೈ ಪರ  ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ ರಿತುರಾಜ್ ಗಾಯಕ್ವಾಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
 

SCROLL FOR NEXT