ಕ್ರಿಕೆಟ್

ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 6 ವಿಕೆಟ್ ಗಳ ಜಯ 

Srinivas Rao BV

ಅಬುಧಾಬಿ: ಅಬುಧಾಬಿಯಲ್ಲಿ ನಡೆದ ಐಪಿಎಲ್-2021 ರ 42 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಭರ್ಜರಿ 6 ವಿಕೆಟ್ ಗಳ ಗೆಲುವನ್ನು ದಾಖಲಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಗೆ ಕಟ್ಟಿಹಾಕಿತು.

ಏಡನ್‌ ಮಾರ್ಕ್ರಮ್‌ 29 ಎಸೆತಗಳನ್ನೆದುರಿಸಿ 42 ರನ್ ಗಳಿಸುವ ಮೂಲಕ ತಂಡಕ್ಕೆ ಚೇತರಿಕೆ ನೀಡುವ ಆಟ ಪ್ರದರ್ಶಿಸಿದರು. ಉಳಿದಂತೆ ನಾಯಕ ಕೆಎಲ್ ರಾಹುಲ್ 22 ಎಸೆತಗಳಲ್ಲಿ 21 ರನ್ ಗಳಿಸಿದರು. ದೀಪಲ್ ಹೂಡಾ 26 ಎಸೆತಗಳಲ್ಲಿ 28 ರನ್ ಗಳಿಸಿ ತಂಡ 135 ರನ್ ಗಳ ಸಾಧಾರಣ ರನ್ ಮೊತ್ತ ಕಲೆಹಾಕುವುದಕ್ಕೆ ಸಹಕಾರಿಯಾದರು.

ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ 10 ಎಸೆತಗಳನ್ನು ಎದುರಿಸಿ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ ಬಹುಬೇಗನೇ ಪೆವಿಲಿಯನ್ ನತ್ತ ನಡೆದಿದ್ದು ಆರಂಭಿಕ ಆಘಾತವಾಗಿತ್ತು. ಕ್ವಿಂಟೋನ್ ಡಿ'ಕಾಕ್ 29 ಎಸೆತಗಳಲ್ಲಿ 27 ರನ್ ದಾಖಲಿಸಿದರು. ಸೌರಭ್ ತಿವಾರಿ (37 ಎಸೆತಗಳಲ್ಲಿ 45 ರನ್) ಹಾರ್ದಿಕ್ ಪಾಂಡ್ಯ (30 ಎಸೆತಗಳಲ್ಲಿ 40 ರನ್)  ಮುಂಬೈ ಇಂಡಿಯನ್ಸ್ ನ್ನು ಗೆಲುವಿನ ದಡ ದಾಟಿಸಿದರು, ಮುಂಬೈ ಇಂಡಿಯನ್ಸ್ ಗೆ ಇದು ಅತ್ಯಗತ್ಯವಾದ ಗೆಲುವಾಗಿತ್ತು ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಗೆ ಇದು 5 ನೇ ಗೆಲುವಾಗಿದ್ದು ಅಂಕಪಟ್ಟಿಯಲ್ಲಿ 6 ನೇ ಸ್ಥಾನಕ್ಕೇರಿದೆ. ಇತ್ತ ಐಪಿಎಲ್-2021 ರಲ್ಲಿ 6 ನೇ ಸೋಲನ್ನು ಕಂಡ ಪಂಜಾಬ್ ತಂಡ 7 ನೇ ಸ್ಥಾನಕ್ಕೆ ಕುಸಿದಿದೆ.

SCROLL FOR NEXT