ಆರ್ ಸಿಬಿ 
ಕ್ರಿಕೆಟ್

ಐಪಿಎಲ್-2021: ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ ಸಿಬಿಗೆ 7 ವಿಕೆಟ್ ಗಳ ಭರ್ಜರಿ ಜಯ

ದುಬೈ ನಲ್ಲಿ ನಡೆದ 43 ನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ 7 ವಿಕೆಟ್ ಗಳ ಜಯ ಗಳಿಸಿದೆ.

ದುಬೈ: ದುಬೈ ನಲ್ಲಿ ನಡೆದ 43 ನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ 7 ವಿಕೆಟ್ ಗಳ ಜಯ ಗಳಿಸಿದೆ.

ಈ ಪಂದ್ಯವನ್ನು ಸೋತಿರುವುದರಿಂದ ರಾಜಸ್ಥಾನ ರಾಯಲ್ಸ್ ತಂಡದ ಪ್ಲೇ ಆಫ್ ಕನಸು ಕ್ಷೀಣಿಸಿದೆ. ಇನ್ನು ಪಂದ್ಯವನ್ನು ಗೆದ್ದಿರುವ ಆರ್ ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದು ಪ್ಲೇ ಆಫ್ ಗೆ ಹೋಗುವುದು ಬಹುತೇಕ ಖಚಿತಗೊಂಡಿದೆ. 

ಆರ್ ಆರ್- ಆರ್ ಸಿಬಿ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಅತ್ಯುತ್ತಮ ಆರಂಭ ಲಭಿಸಿತು.

ಎವಿನ್ ಲೂಯಿಸ್ (37 ಎಸೆತಗಳಲ್ಲಿ 58 ರನ್) ಹಾಗೂ ಯಶಸ್ವಿ ಜೈಸ್ವಾಲ್ (22 ಎಸೆತಗಳಲ್ಲಿ 31 ರನ್) ಗಳಿಸಿ ತಂಡಕ್ಕೆ ಉತ್ತಮ ಆರಂಭವನ್ನೇನೋ ನೀಡಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಲೈನ್ ಕುಸಿತದ ಪರಿಣಾಮ ಆರ್ ಆರ್ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗದೇ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 149 ರನ್ ಗಳಿಸಿತು.

ಸಾಧಾರಣ ರನ್ ಮೊತ್ತವನ್ನು ಬೆನ್ನಟ್ಟಿದ ಆರ್ ಸಿಬಿ ತಂಡ 17.1 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಪಂದ್ಯ ಗೆದ್ದಿದೆ. 

ಆರ್ ಸಿಬಿ ಪರ ವಿರಾಟ್ ಕೊಹ್ಲಿ (20 ಎಸೆತಗಳಲ್ಲಿ 25) ದೇವದತ್ ಪಡಿಕ್ಕಲ್ (17 ಎಸೆತಗಳಲ್ಲಿ 22 ರನ್) ಶ್ರೀಕಾಂತ್ ಭರತ್ (35 ಎಸೆತಗಳಲ್ಲಿ 44 ರನ್)  ಗ್ಲೆನ್ ಮ್ಯಾಕ್ಸ್ ವೆಲ್ 30 ಎಸೆತಗಳಲ್ಲಿ 50 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪ್ಲೇ ಆಫ್ ಸಂಭಾವ್ಯ ತಂಡಗಳು: 

ಸಿಎಸ್ ಕೆ ಹಾಗೂ ಡೆಲ್ಲಿ ತಂಡಗಳು ಈಗಾಗಲೇ ಮೊದಲೆರಡು ಸ್ಥಾನಗಳಲ್ಲಿದ್ದು ಪ್ಲೇ ಆಫ್ ಗೆ ಖಚಿತಗೊಂಡಿವೆ. ಈಗ ಆರ್ ಸಿಬಿ 3 ನೇ ಸ್ಥಾನದಲ್ಲಿದ್ದರೂ, ರನ್ ರೇಟ್ ಕಡಿಮೆ ಇರುವುದರಿಂದ ಪ್ಲೇ ಆಫ್ ನ ಕನಸು ನನಸಾಗಬೇಕಾದರೆ ಬಾಕಿ ಇರುವ 3 ಪಂದ್ಯಗಳ ಪೈಕಿ 1 ಪಂದ್ಯವನ್ನು ಅಗತ್ಯವಾಗಿ ಗೆಲ್ಲಲೇಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT